ಬೆಂಗಳೂರು: ಸಿದ್ದರಾಮಯ್ಯ ಹಾಗೂ ಡಿಕೆಶಿ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುತ್ತಿದ್ದಾರೆ ಎಂದು ಬಿಜೆಪಿಯು ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪಿ, “ಸಿದ್ದರಾಮಯ್ಯ ಹಾಗೂ ಡಿಕೆಶಿ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುತ್ತಿದ್ದಾರೆ. ಬಿಜೆಪಿಯವರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಭ್ರಮೆ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ನಾಯಕರಿಗೆ ಧೈರ್ಯವಿದ್ದರೆ, ಅವರ ಸಂಪರ್ಕಕ್ಕೆ ಬಂದ ಒಬ್ಬ ಬಿಜೆಪಿ ಶಾಸಕನ ಹೆಸರನ್ನು ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದೆ.

ಇನ್ನು ಸಿದ್ದರಾಮಯ್ಯನವರೇ, ನಿಮ್ಮ ಜೊತೆ ಯಾರಾದರೂ ಬಂದರೆ ಅದು ತತ್ವ ಸಿದ್ದಾಂತದ ನಂಬಿಕೆಯಿಂದಲ್ಲ. ಅದು ಅವಕಾಶವಾದ ಹಾಗೂ ಅಧಿಕಾರ ದಾಹಕ್ಕಾಗಿ ಮಾತ್ರ ಎಂದು ಟಾಂಗ್ ನೀಡಿದೆ.