ಮೈಸೂರು:ಸಿದ್ದರಾಮಯ್ಯ ಅವರ ಅಮೃತಮಹೋತ್ಸವ ಕಾರ್ಯಕ್ರಮ ಮುಗಿಸಿ ವಾಪಸ್ ಊರಿಗೆ ಹೋಗುವಾಗ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಶಾಸಕ ಜಮೀರ್ ಅಹಮ್ಮದ್ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ‌.

ದಾವಣಗೆರೆಯಿಂದ ಹಿಂದಿರುಗುವ ವೇಳೆ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಫಸಿ ಉದ್ದಿನ್(51) ಅಪಘಾತದಲ್ಲಿ ಮೃತಪಟ್ಟಿದ್ದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್ ಅವರು ಮೃತ ಬಡಕುಟುಂಬದ ಪರಿಸ್ಥಿತಿಯನ್ನು ಜಮೀರ್ ಅಹಮ್ಮದ್ ಅವರಿಗೆ ಕರೆ ಮಾಡಿ ವಿವರಿಸಿದ್ದರು. ಆ ಬಳಿಕ ಜಮೀರ್ ಪರಿಹಾರ ಘೋಷಿಸಿದ್ದಾರೆ.