ಚಿತ್ರದುರ್ಗ: ಸಿಎಂ ಬಸವರಾಜ ಬೊಮ್ಮಾಯಿ ಎಸ್ಕಾರ್ಟ್ ನೀಡಿದ ಪೊಲೀಸ್ ವಾಹನ ಪಲ್ಟಿ ಆಗಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ತಾಯಿ, ಮಗನಿಗೆ ಗಾಯವಾಗಿರುವಂಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕು ಕಚೇರಿ ಬಳಿ ನಡೆದಿದೆ.
ಸಿಇಎನ್ ಸಿಪಿಐ ರಮಾಕಾಂತ್ ಇದ್ದ ಎಸ್ಕಾರ್ಟ್ ವಾಹನ ಪಲ್ಟಿಯಾಗಿದೆ. ವಾಣಿವಿಲಾಸ ಡ್ಯಾಂನಿಂದ ಹಿರಿಯೂರಿಗೆ ಬರುವ ವೇಳೆ ಅವಘಡ ಸಂಭವಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ತಾಯಿ, ಮಗನಿಗೆ ಗಾಯವಾಗಿದೆ. ಮಸ್ಕಲ್ ಗ್ರಾಮದ ಮಂಜುಳಾ ಮತ್ತು ಪುತ್ರ ಮನೋಜ್ ಗಾಯಾಳುಗಳು. ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.!
ಆದರೆ ಎಸ್ಪಿ ಅವರು ನೀಡಿದ ಹೇಳಿಕೆಯಲ್ಲಿ ಈ ಘಟನೆಯಲ್ಲಿ ಪಿಐ ರಮಾಕಾಂತ್, ಅನಸೂಯಾ ಪಿಎಸ್ಐ, ರಮೇಶ್ ಸಿಪಿಸಿ, ಅರ್ಚಿತಾ , ಪ್ರವೀಣ್ ಕುಮಾರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮತ್ತು ಇವರು ಇದ್ದ ವಾಹನವೂ ಸಿಎಂ ಬೆಂಗಾವಲು ಪಡೆಗೆ ಸೇರಿದ್ದಲ್ಲ ಬೇರೆ ಬಂದ್ ಬಸತ್ತುಗೆ ಸೇರಿದ ವಾಹನ ಎಂದು ಹೇಳಿದ್ದಾರೆ.!