ಸಿಎಂ ಯಡಿಯೂರಪ್ಪ ಪೂರ್ಣಾವಧಿ ಮುಖ್ಯ ಮಂತ್ರಿ ಆಗಿರುತ್ತಾರ.? - BC Suddi
ಸಿಎಂ ಯಡಿಯೂರಪ್ಪ ಪೂರ್ಣಾವಧಿ ಮುಖ್ಯ ಮಂತ್ರಿ ಆಗಿರುತ್ತಾರ.?

ಸಿಎಂ ಯಡಿಯೂರಪ್ಪ ಪೂರ್ಣಾವಧಿ ಮುಖ್ಯ ಮಂತ್ರಿ ಆಗಿರುತ್ತಾರ.?

ಶಿವಮೊಗ್ಗ: ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಆದಾಗಿನಿಂದ ಒಂದಲ್ಲ  ಒಂದು ಕಷ್ಟಗಳನ್ನು ಎದುರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಕೆಲವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಅವರ ರಾಶಿ ಭವಿಷ್ಯವನ್ನು ನೋಡಿ ಸಾಗರದ ಸಿ. ಕೊಟ್ರೇಶಯ್ಯ ಕಲ್ಯಾಣಮಠ ಭವಿಷ್ಯ ನುಡಿದಿದ್ದಾರೆ.

ಅವರ ಭವಿಷ್ಯ ಏನಪ್ಪ ಅಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ಇವರಿಗೆ ರಾಹುದಶಾ-ಶುಕ್ರಭುಕ್ತಿ ನಡೆಯುತ್ತಿದ್ದು, ಇವರ ಸರ್ಕಾರ ಪೂರ್ಣಾವಧಿ ನಡೆಯಲಿದೆ. ಹಾಗೇ ಬಿಎಸ್ ವೈ ಅಧಿಕಾರ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ಜಾತಕದ ಪೂರ್ಣಪಾಠ ಇಂತಿದೆ; ದಿನಾಂಕ:27/28, ಫೆಬ್ರವರಿ 1943 ಶನಿವಾರ/ಭಾನುವಾರ ರಾತ್ರಿ 3.00 ಘಂಟೆಗೆ ಜನನವಾಗಿದ್ದು ಇವರದು ಧನಸ್ಸು ಲಗ್ನ, ಜೈಷ್ಠಾ ನಕ್ಷತ್ರ, ವೃಶ್ಚಿಕ ರಾಶಿಯಾಗಿದೆ. ಇವರಿಗೆ 7.9.2006ರಿಂದ ಮಂಗಳ ದಶಾ ಉಚ್ಚ ದೆಸೆಯಿದ್ದು ಇವರಿಗೆ ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಮತ್ತೆ ಚುನಾವಣೆ ನಡೆದು ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಕಲ್ಯಾಣಮಠ ಭವಿಷ್ಯ ಹೇಳಿತ್ತು.!