ಬೆಂಗಳೂರು : ಮುಂದೊಮ್ಮೆ ಸಿಎಂ ಅವಕಾಶ ಸಿಕ್ಕರೆ . ದಲಿತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ .

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಾತನಾಡಿದ ಅವರು ಅಸ್ಪೃಶ್ಯತೆ ಕಾನೂನು ಬಾಹಿರ . ಪಟ್ಟಭದ್ರ ಹಿತಾಸಕ್ತಿಗಳ ಜೀವಂತವಾಗಿಟ್ಟಿವೆ . ಶೋಷಿತರು ಇದರ ವಿರುದ್ಧ ಹೋರಾಡಬೇಕು . ಸಮಸಮಾಜದ ನಿರ್ಮಾಣ ಇನ್ನೂ ಕನಸಾಗಿದೆ ಎಂದ ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ .