ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಇಲ್ಲಿದೆ ಮಾಹಿತಿ.! - BC Suddi
ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಇಲ್ಲಿದೆ ಮಾಹಿತಿ.!

ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಬಸ್ ಪಾಸ್ ಬಗ್ಗೆ ಇಲ್ಲಿದೆ ಮಾಹಿತಿ.!

ಬೆಂಗಳೂರು: ಸಾರಿಗೆ ನೌಕರರು 6 ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಮತ್ತು ಮಾಸಿಕ ಪಾಸ್ ಹೊಂದಿದವರು ಪ್ರಯಾಣಿಸಲು ತೊಂದರೆಯಾಗಿದೆ . ಈ ಹಿನ್ನೆಲೆ ಮುಷ್ಕರದ ಅವಧಿಯ ದಿನಗಳಿಗೆ ಸರಿಸಮಾನವಾಗಿ ಬಸ್ ಪಾಸ್ ಗಳ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ.!

ಕೆ ಎಸ್ ಆರ್ ಟಿ ಸಿ ಬಸ್ ಪಾಸ್ ಗಳು ಮತ್ತು ಮಾಸಿಕ ಬಸ್ ಪಾಸ್ ಗಳನ್ನು ಹೊಂದಿರುವ ಸಾರ್ವಜನಿಕರಿಗೆ ಮುಷ್ಕರದಿಂದಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಸಾಧ್ಯವಾಗಿರುವುದಿಲ್ಲ, ಆದ್ದರಿಂದ ಮುಷ್ಕರದ ಅವಧಿಯ ದಿನಗಳಿಗೆ ಸರಿಸಮಾನವಾಗಿ ಬಸ್ ಪಾಸ್ ಗಳ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ ಎಂದು ಕೆಎಸ್‌ಆರ್ಟಿಸಿ ವ್ಯವಸ್ಥಾಪಕ ನಿaರ್ದೇಶಕರು ಮಾಹಿತಿ ನೀಡಿದ್ದಾರೆ.