ನವದೆಹಲಿ: ಸರಸರನೆ ಲೈಟ್ ಕಂಬ ಏರುವ ಮೂಲಕ ತೆಲಂಗಾಣದ ಯುವತಿಯೋರ್ವಳು ಸರ್ಕಾರಿ ಲೈನ್‌‌ಮ್ಯಾನ್ ಹುದ್ದೆಗೆ ಆಯ್ಕೆಯಾಗಿದ್ದಾಳೆ. ಆ ಮೂಲಕ ಮೊದಲ ಮಹಿಳಾ ಲೈನ್‌ಮ್ಯಾನ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಗಣೇಶಪಲ್ಲಿ ಎಂಬ ಪುಟ್ಟ ಗ್ರಾಮದ ಸಿರಿಶಾ ಎಂಬ ಯುವತಿಯೇ ಈ ಸಾಧನೆ ಮಾಡಿದ ಗಟ್ಟಿಗಿತ್ತಿ. ಈಕೆ ಲೈಟ್ ಕಂಬ ಏರಿದ ಸಾಧನೆಗೆ ಸ್ವತಃ ತೆಲಂಗಾಣ ಇಂಧನ ಸಚಿವ ಜಗದೀಶ್ ರೆಡ್ಡಿ ಅವರೇ ತೆಲಂಗಾಣದ ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್‌ ಸಂಸ್ಥೆಗೆ ಸಿರಿಶಾಗೆ ನೇಮಕಾತಿ ಪತ್ರ ನೀಡಿದ್ದಾರೆ.

ಲೈನ್‌ಮ್ಯಾನ್ ಹುದ್ದೆಗೆ ಸಿರಿಶಾ 2019ರಲ್ಲಿ ಸಿರಿಶಾ ಅರ್ಜಿ ಸಲ್ಲಿಸಿದ್ದರೂ ಮಹಿಳೆ ಎಂಬ ಕಾರಣಕ್ಕೆ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದರಿಂದ ಕೋಪಗೊಂಡ ಅವರು ತನ್ನ ಕುಟುಂಬದವರ ನೆರವಿನೊಂದಿಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಳು. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನೇಮಕಾತಿಗಾಗಿ 8 ಮೀಟರ್ ಲೈಟ್ ಕಂಬ ಏರುವ ಪ್ರಾಯೋಗಿಕ ಪರೀಕ್ಷೆ ಇತ್ತು. ಇದರಲ್ಲಿ ಸಿರಿಶಾ ಯಶಸ್ವಿಯಾಗಿದ್ದಾರೆ. ಆಕೆ ಸರಸರನೆ ಲೈಟ್ ಕಂಬ ಏರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.