ಬೆಂಗಳೂರು; ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ರಾಜ್‌, ಅದರ ವ್ಯಾಪ್ತಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, 10% ಹೆಚ್ಚಳ ಮಾಡಿದೆ.

ಆಗಸ್ಟ್‌ನಿಂದಲೇ ಜಾರಿಗೆ ಬರಲಿದೆ. ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ, ಕನಿಷ್ಠ ವೇತನ 17,555 ರೂ., ತುಟ್ಟಿಭತ್ಯೆ 900 ರೂ., PF 2,100 ರೂ., ಇಎಸ್‌ಐ 550 ರೂ. ಸೇರಿದಂತೆ ಮಾಸಿಕ 22,505 ರೂ. ಸಂಬಳ ನೀಡಬೇಕು. ಇನ್ನು, 2016ರಲ್ಲಿ ಕೊನೆಯದಾಗಿ ಸರ್ಕಾರ ವೇತನವನ್ನು ಪರಿಷ್ಕರಣೆ ಮಾಡಿತ್ತು.