ಶಿಕ್ಷಕರ ವರ್ಗಾವಣೆಗೆ ಮಹತ್ವದ ಸುದ್ದಿ.! - BC Suddi
ಶಿಕ್ಷಕರ ವರ್ಗಾವಣೆಗೆ ಮಹತ್ವದ ಸುದ್ದಿ.!

ಶಿಕ್ಷಕರ ವರ್ಗಾವಣೆಗೆ ಮಹತ್ವದ ಸುದ್ದಿ.!

 

ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ಮುಂದಾಗಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮಹತ್ವದ ಸುದ್ದಿ.!

ಕಡ್ಡಾಯ ವರ್ಗಾವಣೆ ಸಂದರ್ಭದಲ್ಲಿ ಕೆಲವು ಶಿಕ್ಷಕರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ವರ್ಗಾವಣೆ ಪ್ರಕ್ರಿಯೆಗೆ ಹಿನ್ನಡೆಯಾಗಿದ್ದರಿಂದ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದೆ.

ಶಿಕ್ಷಕರ ವರ್ಗಾವಣೆಗೆ ಕೋರ್ಟ್ ತಡೆಯಿಂದ ಹಿನ್ನಡೆಯಾಗಿತ್ತು. ಹೀಗಾಗಿ ಸುಮಾರು 70 ಸಾವಿರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿದ್ದರಿಂದ ಸುಗ್ರೀವಾಜ್ಞೆ ಜಾರಿಗೊಳಿಸುವ ಮೂಲಕ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿದುಬಂದಿದೆ.