ಬೆಂಗಳೂರು: ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ, ಪರಸ್ಪರದ ವರ್ಗಾವಣೆಯನ್ನು  ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದಿನಾಂಕ 11-11-2020ರ ಅಧಿಸೂಚನೆಯನುಸಾರ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅಂತರ್ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರುಗಳ ಕೋರಿಕೆ ಹಾಗೂ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಳನ್ನು ದಿನಾಂಕ 18-01-2022 ರಿಂದ ದಿನಾಂಕ 25-01-2022ರವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕೌನ್ಸಿಲಿಂಕ್ ಅನ್ನು ಬೆಂಗಳೂರಿನ ಕಾವೇರಿ ಭವನದ ಎದುರು ಇರುವಂತೆ ಶಿಕ್ಷಕರ ಸದನದಲ್ಲಿ ನಡೆಸಲಾಗುತ್ತದೆ. ಅಂತಿಮ ಆದ್ಯತಾ ಕೌನ್ಸಿಲಿಂಗ್ ಪಟ್ಟಿಯಲ್ಲಿರುವ ಶಿಕ್ಷಕರು ನಿಗಧಿತ ದಿನಾಂಕ ಹಾಗೂ ಸಮಯಕ್ಕೆ ಮೂಲ ಅರ್ಜಿ ಹಾಗೂ ಕೋರಿರುವ ಆದ್ಯತೆಯ ಮೂಲ ದಾಖಲೆಗಳೊಂದಿಗೆ ಕೌನ್ಸಿಲಿಂಗ್ ನಲ್ಲಿ ಹಾಜರಾಗಿ, ಸ್ಥಳ ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.