ವಿಯೆಟ್ನಾಂನಲ್ಲಿ ಒಂದು ಮನಕಲುಕುವ ಘಟನೆ ನಡೆದಿದೆ. ಕೋವಿಡ್ ಸೋಂಕು ಹೆಚ್ಚಾದಂತೆ ವಿಯೆಟ್ನಾಂ ತೊರೆದು ಸಂಬಂಧಿಕರಿದ್ದ ಪ್ರಾಂತ್ಯಕ್ಕೆ ತೆರಳಿದ್ದ ದಂಪತಿ ಕೊವಿಡ್ ಪರೀಕ್ಷೆಗೆ ಹೋದರೆ, ಇತ್ತ ಕಡೆ ಅವರು ಸಾಕಿದ್ದ 12 ಶ್ವಾನಗಳನ್ನು ಅಧಿಕಾರಿಗಳು ಕೊಂದಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ಇದರಿಂದ ದುಃಖ ತಡೆಯಲಾಗುತ್ತಿಲ್ಲ, ಕೊವಿಡ್ ಹರಡಬಹುದೆಂಬ ನಿರೀಕ್ಷೆಯಲ್ಲಿ ಸ್ಥಳೀಯ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ವಿಯಾಟ್ನಾಂ ದಂಪತಿ ಬಿಬಿಸಿ ಸುದ್ದಿ ಮಾಧ್ಯಮದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

49 ವರ್ಷದ ಫಾಮ್ ಮಿನ್ ಹಂಗ್ ಎಂಬುವರರು ಇಟ್ಟಿಗೆ ತಯಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಮತ್ತು ಅವರ ಪತ್ನಿ ಮನೆಯಲ್ಲಿ 12 ನಾಯಿಗಳನ್ನು ಮಕ್ಕಳಂತೆಯೇ ಸಾಕಿದ್ದರು. ದಿನ ಸಾಗುತ್ತಿದ್ದಂತೆಯೇ ವಿಯೆಟ್ನಾಂನಲ್ಲಿ ಕೊವಿಡ್ ತೀವ್ರವಾಗಿ ಹರಡುತ್ತಿದ್ದರಿಂದ ಕಾರ್ಮಿಕರಿಗೆ ತುಂಬಾ ಕಷ್ಟವಾಯಿತು. ಲಾಕ್​ಡೌನ್​ ಜಾರಿಯಲ್ಲಿದ್ದ ಕಾರಣ ಜೀವನ ನಡೆಸುವುದು ಕಷ್ಟವಾಯಿತು. ದಂಪತಿ, ಅಕ್ಟೋಬರ್ 8ರಂದು ಮಳೆಯಲ್ಲಿ ರೇನ್​ಕೋಟ್​ ಧರಿಸಿ ತಮ್ಮ ಸಂಬಂಧಿಕರಿರುವ ಕ್ಯಾ ಮೌ ಪ್ರಾಂತ್ಯದ ಖಾನ್ ಹಂಗ್​ಗೆ 280 ಕಿ. ಮೀ ಸಂಚರಿಸಿ ಪ್ರಯಾಣವನ್ನು ಆರಂಭಿಸಿದರು. 12 ನಾಯಿಗಳು ಮತ್ತು ಒಂದು ಬೆಕ್ಕಿನೊಡನೆ ಪ್ರಯಾಣಿಸುತ್ತಿರುವ ಫೋಟೋಗಳನ್ನು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಪಾಕ್​ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥನ ನಡುವೆ ಮನಸ್ತಾಪ; ಮುಗಿಯದ ಭಿನ್ನಾಭಿಪ್ರಾಯ

ತಮ್ಮ ಮೋಟಾರು ಬೈಕ್​ನಲ್ಲಿ ಮಕ್ಕಳಂತೆ ಸಾಕಿದ್ದ ನಾಯಿಗಳು ಮತ್ತು ಮನೆಯ ವಸ್ತುಗಳನ್ನು ಕಟ್ಟಿಕೊಂಡು ಹೋಗುತ್ತಿರುವ ದೃಶ್ಯವನ್ನು ಪೋಸ್ಟ್ ಮಾಡಿದ್ದರು. ಅದನ್ನು ನೋಡಿದ ನೆಟ್ಟಿಗರಲ್ಲಿ ಕೆಲವರು ಸುರಕ್ಷಿತ ಪ್ರಯಾಣಕ್ಕೆ ಹಾರೈಸಿದರು ಜತೆಗೆ ಇನ್ನು ಕೆಲವರು ಪ್ರಯಾಣ ಸುಖಕರವಾಗಿರಲಿ ಎಂದು ಹೇಳಿದರು. ದಂಪತಿ ಕಾ ಮೌ ಪ್ರಾಂತ್ಯವನ್ನು ಪ್ರವೇಶಿಸುತ್ತಿದ್ದಂತೆಯೇ ತಾವು ಸಾಕಿದ್ದ 19 ನಾಯಿಗಳಲ್ಲಿ ಎರಡು ನಾಯಿಗಳನ್ನು ಸ್ವಯಂ ಸೇವಕರಿಗೆ ನೀಡಿದರು, ಮತ್ತೊಂದು ಸಾವಿಗೀಡಾಯಿತು. ಅವರಲ್ಲಿ 12 ನಾಯಿ ಮರಿಗಳು ಅವರ ಜತೆಗಿದ್ದವು.

ಖಾನ್ ಹಂಗ್ ತಲುಪಿದ ಬಳಿಕ ಕೊವಿಡ್ ಪರೀಕ್ಷೆ ಕಡ್ಡಾಯವಾದ್ದರಿಂದ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಬೇಕಾಯಿತು. ದಂಪತಿ ಆಸ್ಪತ್ರೆಗೆ ಹೋದರೆ, ಇತ್ತಕಡೆ ಪ್ರಾಣಿಗಳನ್ನು ಕ್ವಾರಂಟೈನ್​ನಲ್ಲಿ ಇರಿಸಲಾಯಿತು. ಅವರು ಬರುವಷ್ಟರಲ್ಲಿ ನಾಯಿಗಳನ್ನು ಕೊಲ್ಲಲಾಗಿದೆ ಎಂಬ ವಿಷಯ ಬಹಿರಂಗವಾಗಿದೆ. ಪ್ರಾಣಿಗಳು ಹೇಗೆ ಕೊಲ್ಲಲ್ಪಟ್ಟವು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಬೆಳಕಿಗೆ ಬಂದಿಲ್ಲ. ಆದರೆ ಅಧಿಕೃತ ಪೊಲೀಸ್ ವೃತ್ತಪತ್ರಿಕೆ ನಾಯಿಗಳು ಸುಟ್ಟುಹೋದ ಬಗ್ಗೆ ಫೋಟೋಗಳನ್ನು ಹೊಂದಿವೆ.

ಈ ಕುರಿತಂತೆ ಮಾತನಾಡಿದ ಸ್ಥಳೀಯ ಅಧಿಕಾರಿ ಟ್ರಾನ್ ಕಾಂಗ್, ರೋಗ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕು ಮತ್ತು ಪ್ರಾಣಿಗಳನ್ನು ತಕ್ಷಣವೇ ಕೊಲ್ಲುವ ನಿರ್ಧಾರ ಅಗತ್ಯವಾದ ತಡೆಗಟ್ಟುವ ಕ್ರಮವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅನಾಗರಿಕತೆ
ಇದು ಕ್ರೂರ ಮನಸ್ಥಿತಿ ಮತ್ತು ಹೃದಯವಿದ್ರಾವಕ ಘಟನೆ ಎಂದು ಅನೇಕರು ಹೇಳಿದ್ದಾರೆ. ಆನ್​ಲೈನ್​ನಲ್ಲಿ ಈ ಕುರಿತಂತೆ ನಾನಾ ಪ್ರತಿಕ್ರಿಯೆಗಳು ಕೇಳಿಬಂದಿವೆ. ಜಾಗತಿಕ ಪ್ರಾಣಿ ಕಲ್ಯಾಣ ಸಂಸ್ಥೆ ಸದಸ್ಯೆ ಹಾಂಗ್ ಅನ್ಹ್​ ಈ ಘಟನೆಯನ್ನು ಅನಾಗರಿಕತೆ ಎಂದು ಹೇಳಿದ್ದಾರೆ. ಈ ಕುರಿಂತೆ ಸಂಸ್ಥೆಗೆ ಮನವಿಯನ್ನು ಕಳುಹಿಸುತ್ತೇವೆ ಎಂದು ಅವರು ಮಾತನಾಡಿದ್ದಾರೆ. ಇದು ಅನೈತಿಕತೆ ಮತ್ತು ಹಾಸ್ಯಾಸ್ಪದ ಎನಿಸುತ್ತಿದೆ, ಏಕೆಂದರೆ ಮಾಲೀಕರು ಕೊವಿಡ್​ಗೆ ಒಳಗಾಗಿದ್ದರೆ ಸಾಕು ಪ್ರಾಣಿಗಳನ್ನು ಕೊಲ್ಲಬೇಕು ಎಂದು ಸೂಚಿಸುವ ಯಾವುದೇ ಮಾರ್ಗಸೂಚಿಗಳಿಲ್ಲ ಎಂದು ಅಮೆರಿಕದ ವೈದ್ಯಕೀಯ ಕೇಂದ್ರದ ಸಿಬ್ಬಂದಿ ಮತ್ತು ವಿಜ್ಞಾನಿ ಗುಯೆನ್ ಹಾಂಗ್ ವು ಹೇಳಿದ್ದಾರೆ. ನಾಯಿಗಳು ಮತ್ತು ಬೆಕ್ಕುಗಳಿಂದ ಮನುಷ್ಯರಿಗೆ ಕೋವಿಡ್ ಹರಡಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

ಟೆಕ್ಸಾಸ್​ನಲ್ಲಿ ನಡೆದ ಅಧ್ಯಯನವೊಂದರಲ್ಲಿ ಕೊವಿಡ್ ರೋಗಿಗಳ ಮನೆಯಲ್ಲಿ ಸಾಕಿದ್ದ 76 ನಾಯಿಗಳು ಮತ್ತು ಬೆಕ್ಕುಗಳನ್ನು ಸಮೀಕ್ಷೆ ಮಾಡಲಾಗಿದ್ದು, ಮೂರು ಬೆಕ್ಕುಗಳು ಮತ್ತು ಒಂದು ನಾಯಿ ಸೋಂಕಿಗೆ ಒಳಗಾಗಿರುವುದು ತಿಳಿದು ಬಂದಿದೆ. ಆದರೆ ಸೌಮ್ಯ ಲಕ್ಷಣಗಳು ಮಾತ್ರ ತಿಳಿದು ಬಂದಿದ್ದು, ಅವು ಬಹುಬೇಗ ಚೇತರಿಸಿಕೊಂಡಿವೆ. ಇಂತಹ ಪರಿಸ್ಥಿತಿ ಎದುರಾದರೆ ಸರಿಪಡಿಸಲು ಹಲವಾರು ಮಾರ್ಗಗಳಿವೆ. ಅವುಗಳನ್ನು ಪತ್ಯೇಕವಾಗಿಡುವುದು, ಕ್ವಾರಂಟೈನ್ನಲ್ಲಿಡುವುದು. ಅವು ಚೇತರಿಸಿಕೊಳ್ಳುವವರೆಗೆ ಈ ರೀತಿಯ ಮಾರ್ಗಗಳನ್ನು ಅನುಸರಿಸಬಹುದು ಎಂದು ಡಾ ಗುಯೆನ್ ಹೇಳಿದ್ದಾರೆ.

ಯುದ್ಧದ ಮನಸ್ಥಿತಿ
ವಿಯೆಟ್ನಾಂನಲ್ಲಿ ಸುಮಾರು 840,000 ಪ್ರಕರಣಗಳು ಮತ್ತು ಒಟ್ಟು 20,000 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಇತ್ತೀಚೆಗೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿವೆ. ವೈರಸ್ ಹರಡಿದ್ದಕ್ಕಾಗಿ ಇಲ್ಲಿ ಅನೇಕರ ಮೇಲೆ ಆರೋಪ ಹೊರಿಸಲಾಗಿದೆ ಮತ್ತು ಶಿಕ್ಷೆ ವಿಧಿಸಲಾಗಿದೆ. ವಿಯೆಟ್ನಾಂನಲ್ಲಿ ಸರ್ಕಾರವು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಆದ್ಯತೆಗಳನ್ನು ನೀಡುತ್ತಿದೆ. ಯುದ್ಧದ ಸಮಯದಲ್ಲಿ ತರ್ಕಬದ್ಧ ಮತ್ತು ಮಾನವೀಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ! ಎಂಬರ್ಥದಲ್ಲಿ, ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ಶತ್ರುವಿನ ವಿರುದ್ಧ ಹೋರಾಡುವುದು ಎಂಬ ಘೋಷವಾಕ್ಯವಿದೆ.

ಫಾಮ್ ಅವರು ತನ್ನ ನಾಯಿಗಳನ್ನು ಸುಮಾರು ಆರು ವರ್ಷಗಳಿಂದ ನೋಡಿಕೊಳ್ಳುತ್ತಿದ್ದರು. ಅಧಿಕಾರಿಗಳು ನನ್ನ ಮಕ್ಕಳನ್ನು ಕೊಂದರು ಎಂಬುದನ್ನು ಅವರು ಕಂಡುಕೊಂಡರು. ಖಂಡಿತವಾಗಿಯೂ ನನ್ನ ಮಕ್ಕಳಿಗೆ ನ್ಯಾಯ ಬೇಕು ಎಂದು ಆಸ್ಪತ್ರೆಯಿಂದ ಬಂದ ದಂಪತಿ ಮನನೊಂದಿದ್ದಾರೆ.