ಮೂಢನಂಬಿಕೆ ಮತ್ತು ವಾಮಾಚಾರಕ್ಕೆ ದಂಪತಿಯನ್ನ ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಜಾರ್ಖಂಡ್​ನ ಪಶ್ಚಿನ ಸಿಂಗ್​ಭೂಮ್​ ಜಿಲ್ಲೆಯಲ್ಲಿ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶವಗಳ ಗುರುತು ಸಿಗಬಾರದಂದೆ ಅರೆಬೆಂದ ಶವಗಳನ್ನು ಕಾಡಿನಲ್ಲಿ ಹೂತು ಆರೋಪಿಗಳು ಪರಾರಿಯಾಗಿದ್ದಾರೆ. ಮೃತ ದಂಪತಿಯನ್ನು ನಕ್ಸಲ್ ಪೀಡಿತ ಗ್ರಾಮವಾದ ಬುಂಡು ನಿವಾಸಿ ಗೋಮಿಯಾ ಕೆರೈ ಮತ್ತು ಆತನ ಪತ್ನಿ ಎಂದು ಗುರುತಿಸಲಾಗಿದೆ. ಕೊಲೆಯಲ್ಲಿ ಮೃತನ ಸಹೋದರನ ಕೈವಾಡವಿದೆ ಎನ್ನಲಾಗಿದೆ. ದಂಪತಿಯಿಂದ ಹಳ್ಳಿಗೆ ಕಡಕಾಗುತ್ತಿದೆ ಎಂದು ಮದ್ಯಪಾನ ಮಾಡಿದ್ದ ಕೊಲೆಗಾರರು ಅವರನ್ನ ಕಾಡಿಗೆ ಕರೆದೊಯ್ದು ಪೂಜೆ ಮಾಡಿಸಿ ಬೆಂಕಿ ಹಚ್ಚಿದ್ದಾರೆ ಬಳಿಕ ಶವದ ಗುರುತು ಸಿಗಬಾರದು ಎಂದು ಹೆಣವನ್ನು ಹೂತಿದ್ದಾರೆ. ಆದರೆ ಈ ವಿಷಯ ಪೊಲೀಸರಿಗೆ ತಿಳಿಸಿದರೆ ಗ್ರಾಮಸ್ಥರನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಇದರಿಂದ ಹೆದರಿದ ಗ್ರಾಮಸ್ಥರು 10 ದಿನಗಳ ಕಾಲ ಯಾವುದೇ ಮಾಹಿತಿ ನೀಡಿರಲಿಲ್ಲ, ಬಳಿಕ ಪೊಲೀಸರ ವಿಚಾರಣೆಯಲ್ಲಿ ಘಟನೆ ಬಯಲಾಗಿದೆ.