ಇದೀಗ ವಾಟ್ಸಾಪ್ ತನ್ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಎರಡು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಎರಡು ಫೀಚರ್ಸ್‌ಗಳು ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಗುರುತಿಸಿಕೊಂಡಿವೆ. ಹೌದು, ವಾಟ್ಸಾಪ್ ತನ್ನ ಬಳಕೆದಾರರಿಗೆ ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಎರಡು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಎರಡು ಹೊಸ ಫೀಚರ್ಸ್‌ಗಳು ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿವೆ ಎನ್ನಲಾಗಿದೆ. ಇವುಗಳನ್ನು ಮೆಸೇಜ್ ರಿಯಾಕ್ಷನ್ ಮತ್ತು ವಾಟ್ಸಾಪ್ ಸ್ಟೇಟಸ್ ಪ್ರೈವೆಸಿ ಶಾರ್ಟ್‌ಕಟ್ ಫೀಚರ್ಸ್ ಹೆಸರಿಸಲಾಗಿದೆ.