ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ಶರಣರ ಪರಂಪರೆಯನ್ನು ಮುಂದುವರೆಸುತ್ತಾ, ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

-ವಚನ

ಎನ್ನ ಮನವೆಂಬ ಮರ್ಕಟನು

ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,

ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ

ಅಳಲಿಸಿ ಬಳಲಿಸುತ್ತಿದೆ ನೋಡಾ!

ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ

ಅಪರಿಮಿತ ಸುಖವನೆಯ್ದದು ನೋಡಾ!

———-

ಕೊಂಬೆಯ ಮೇಲಣ ಮರ್ಕಟನಂತೆ

ಲಂಘಿಸುವುದೆನ್ನ ಮನವು

ನಿಂದಲ್ಲಿ ನಿಲಲೀಯದೆನ್ನ ಮನವು

ಹೊಂದಿದಲ್ಲಿ ಹೊಂದಲೀಯದೆನ್ನ ಮನವು

ಕೂಡಲಸಂಗಮದೇವಾ

ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ