ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: ಅಜಗಣ್ಣ ತಂದೆ
ವ್ಯಾಪ್ತಾವ್ಯಾಪ್ತಿಯೆಂಬುದು ಲಿಂಗಭಾವ,
ತನ್ನಲ್ಲಿ ತಾ ನಿಂದುದು,
ದೃಷ್ಟವಾಗಿ, ಮೋಹವಾಗಿ, ತನ್ನಲ್ಲಿ, ತಾ ನಿಂದುದು,
ಅರಸುವ ಬೆರೆಸುವ ಭೇದವು ತಾನಾಗಿ ನಿಂದುದು,
ಈ ಮಹಾಘನಸೋಮೇಶ್ವರನೆಂಬ ಶಬ್ದವನೊಳಕೊಂಡಿತ್ತು.
12ನೇ ಶತಮಾನದ ಕಲ್ಯಾಣದಲ್ಲಿ ಅನುಭಾವದ ಶಿಖರವೇರಿದ ಕೆಲವೇ ಕೆಲವು ಶರಣರಲ್ಲಿ ಅಜಗಣ್ಣ ತಂದೆ ಒಬ್ಬರು.ಪ್ರಸ್ತುತ ವಚನದಲ್ಲಿ ತಾವು ಸಾಧಿಸಿದ ಅಂಗ ಲಿಂಗ ಸಂಯೋಗದ ಸಮಾಗಮದಲ್ಲಿ ಉದಯಿಸಿದ ಅನುಭಾವದ ಕುರಿತು ವಿವರಿಸಿದ್ದಾರೆ.ಎತ್ತೆತ್ತ ನೋಡಿದರತ್ತ ನೀನೇ ದೇವಾ ಸಕಲ ವಿಸ್ತಾರದ ರೂಹು ನೀನೇ ದೇವ ಎನ್ನುವ ಬಸವಣ್ಣನವರ ಭಾವದ ದೃಷ್ಟಿಯಲ್ಲಿ ಲಿಂಗವನ್ನು ಕಂಡು ಅನುಭವಿಸಿದ ಅವರು ಆ ಚೈತನ್ಯವೇ ತಮ್ಮಲ್ಲಿ ಅಡಗಿದ ಸತ್ಯ ಅರಿತು ಬೆರಗಾಗಿದ್ದಾರೆ (ವ್ಯಾಪ್ತಾವ್ಯಾಪ್ತಿಯೆಂಬುದು ಲಿಂಗ ಭಾವ, ತನ್ನಲ್ಲಿ ತಾ ನಿಂದುದು,) ಇಂತಹ ವಿಶ್ವವ್ಯಾಪಿ ಚೈತನ್ಯ ಸ್ವರೂಪದ ಮಹಾಲಿಂಗವನ್ನು ಇಷ್ಟಲಿಂಗದಲ್ಲಿ ದೃಷ್ಟವಾಗಿ ಮನದಲ್ಲಿ ಮೋಹವಾಗಿ ತನ್ನ ಆತ್ಮದಲ್ಲಿ ಪ್ರಾಣಲಿಂಗ ಸ್ವರೂಪವಾಗಿ ಇರುವುದನ್ನು ಕಂಡು ಆ ಸ್ಥಿತಿಯನ್ನು ಅನುಭವಿಸಿ ಆನಂದಿಸಿದ್ದಾರೆ, (ದೃಷ್ಟವಾಗಿ, ಮೋಹವಾಗಿ, ತನ್ನಲ್ಲಿ, ತಾ ನಿಂದುದು) ಇಂತಹ ಮಹಾ ಘನವನ್ನು ಅರಸುವ ಕಂಡ ನಂತರ ಬೆರೆಸುವ ಮನ ಮಹಾಂತ ನಾಗುವುದು ತಾನೇ ಎಂಬ ಅಚ್ಚರಿಯನ್ನು ಕೊನೆಗೆ ತಿಳಿಸಿದ್ದಾರೆ. ಇದನ್ನೇ ಅಲ್ಲಮರು ಗುಹೇಶ್ವರ (ಗುಹೆ=ಅಂಗ +ಈಶ್ವರ) ಎನ್ನುವುದು ಬಸವಣ್ಣನವರು ಕೂಡಲ+ಸಂಗಮ (ಅಂಗ+ಲಿಂಗ) ಎಂದಿರುವುದು.ಮಹಾಲಿಂಗಕ್ಕೆ ನೀಡುವ ಎಲ್ಲ ಹೆಸರುಗಳ ಶಬ್ದಭಿನ್ನವಾಗಿರಬಹುದು ಆದರೆ ಭಾವವೊಂದೆ ಇದನ್ನೇ ಮಹಾಘನಸೋಮೇಶ್ವರನೆಂಬ ಶಬ್ದವನೊಳಕೊಂಡಿತ್ತು.ಎಂದಿದ್ದಾರೆ.