ಜೈಪುರ:ರಾಜಸ್ಥಾನದಲ್ಲಿ ಲೇಡಿ ಸಿಂಗಂ ಎಂದು‌ ಹೆಸರು ಪಡೆದಿದ್ದ ಮಹಿಳಾ ಪೊಲೀಸ್​ ಸಬ್​​ ಇನ್ಸ್​ಪೆಕ್ಟರ್​ ಸೀಮಾ ಝಖರ್​ ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂದಿಸಿ ಇದೀಗ ಅಮಾನತು‌ ಮಾಡಿ‌‌‌ ಅರೆಸ್ಟ್ ಮಾಡಲಾಗಿದೆ.

ಸೀಮಾ ಝಾಖರ್​, ರಾಜಸ್ಥಾನದ ಸಿರೋಹ್​ ಜಿಲ್ಲೆಯ ಬರ್ಲೋಟ್​ ಪೊಲೀಸ್​ ಠಾಣೆಗೆ ಎಸ್​ಎಚ್​ಒ ಆಗಿ ಕೆಲಸ ಮಾಡುತ್ತಿದ್ದರು. ಸ್ಮಗ್ಲರ್​ಗಳ ಜೊತೆ ಸಂಪರ್ಕ ಬೆಳಸಿಕೊಂಡಿದ್ದ ಸೀಮಾ ಅವರಿಂದ ಪ್ರಕರಣವೊಂದಕ್ಕೆ ಸಂಬಂಧಿಸಿ 10 ಲಕ್ಷ ಡೀಲ್ ಮಾಡಿ ಪ್ರಕರಣ ಮುಚ್ಚಿಹಾಕಿದ್ದರು.

ಈ ವಿಚಾರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಗಮನಕ್ಕೆ ಬಂದು ಪರಿಶೀಲಿಸಿದ್ದರು. ಲಂಚ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿತ್ತು. ಇದೀಗ ಅರೆಸ್ಟ್ ಕೂಡ ಮಾಡಲಾಗಿದೆ.

ನವವಿವಾಹಿತೆಯಾಗಿರುವ ಸೀಮಾ ನವೆಂಬರ್ ನಲ್ಲಿ‌ ಹಸೆಮಣೆ ಏರಿದ್ದರು. ಇದೀಗ‌ ಮಾಡಿದ ತಪ್ಪಿಗೆ ವಿವಾಹವಾದ ಕೆಲವೇ ತಿಂಗಳಲ್ಲಿ ಲೇಡಿ ಸಿಂಗಂ ಕಂಬಿ ಎಣಿಸುವಂತಾಗಿದೆ.