ಬೆಂಗಳೂರು : ಇದುವರೆಗೆ ಅನಾಥ ಮಕ್ಕಳಗಲ್ಲಿನ ಮಕ್ಕಳಿಗೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಣೆಗಾಗಿ ಅನೇಕ ಸೆಲೆಬ್ರೆಟಿಗಳು, ರಾಜಕಾರಣಿಗಳು ಆಚರಿಸುತ್ತಿದ್ದರು. ಹೀಗೆ ಆಚರಿಸಲ್ಪಡುತ್ತಿದ್ದಂತ ಹುಟ್ಟುಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಈ ಕುರಿತಂತೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಆದೇಶ ಹೊರಡಿಸಿದ್ದು, ಇನ್ಮುಂದೆ ಸೆಲೆಬ್ರೆಟಿಗಳು, ರಾಜಕಾರಣಗಳು, ಅನಾಥ ಮಕ್ಕಳ ಆಶ್ರಮಗಳಲ್ಲಿ ಸೆಲೆಬ್ರೆಟಿಗಳು, ರಾಜಕಾರಣಿಗಳು ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸದಂತೆ ಸೂಚಿಸಿದೆ. ಅಲ್ಲದೇ ಒಂದು ವೇಳೆ ಈ ನಿಮಯ ಮೀರಿ ಆಚರಣೆ ಮಾಡಿದಲ್ಲಿ, ಶಿಕ್ಷಾರ್ಹ ಅಪರಾಧವಾಗಲಿದೆ ಎಂಬುದಾಗಿ ಎಚ್ಚರಿಕೆ ನೀಡಿದೆ.

ನಟ ರಾಘವೇಂದ್ರ ರಾಜ್‍ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ

ಅಂದಹಾಗೇ ಇದುವರೆಗೆ ಅನೇಕ ಸೆಲೆಬ್ರೆಟಿಗಳು, ರಾಜಕಾರಣಿಗಳು ತಮ್ಮ ಹುಟ್ಟು ಹಬ್ಬಗಳನ್ನು ಅನೇಕ ಅನಾಥಾಶ್ರಮಗಳಿಗೆ ತೆರಳಿ, ಅಲ್ಲಿನ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು. ಹೀಗೆ ಆಚರಿಸೋದ್ರಿಂದಾಗಿ, ಮಕ್ಕಳಲ್ಲಿ ಕೀಳಿರಿಮೆ ಭಾವನೆ ಬರಲಿದೆ. ತಾರತಮ್ಯ ಭಾವನೆ ಕಾಡಲಿದೆ ಎನ್ನುವ ಮುನ್ಸೂಚನೆಯಿಂದ, ಇದೀಗ ಬ್ರೇಕ್ ಹಾಕಿದೆ.