ರಾಜ್ಯ ಸರಕಾರದಿಂದ ನೂತನ ಮಾರ್ಗಸೂಚಿ ಪ್ರಕಟ..! - BC Suddi
ರಾಜ್ಯ ಸರಕಾರದಿಂದ ನೂತನ ಮಾರ್ಗಸೂಚಿ ಪ್ರಕಟ..!

ರಾಜ್ಯ ಸರಕಾರದಿಂದ ನೂತನ ಮಾರ್ಗಸೂಚಿ ಪ್ರಕಟ..!

ಬೆಂಗಳೂರು: ರಾಜ್ಯ ಸರ್ಕಾರವು ಇಂದು ನೂತನ ಕೊರೋನಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಪರಿಷ್ಕೃತ ಮಾರ್ಗಸೂಚಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಿ ಆದೇಶಿಸಲಾಗಿದೆ.!

ಟಿವಿ ಶೋ ರೂಮ್, ಮೊಬೈಲ್ ಶಾಪ್, ಬ್ಯಾಂಗಲ್ಸ್ ಸ್ಟೋರ್, ಬಂಗಾರದ ಅಂಗಡಿ, ಬುಕ್ ಸ್ಟಾಲ್, ಚಪ್ಪಲಿ ಅಂಗಡಿ, ಫ್ಯಾನ್ಸಿ ಸ್ಟೋರ್, ಆಪ್ಟಿಕಲ್ಸ್, ಎಲೆಕ್ಟ್ರಾನಿಕ್ ಸ್ಟೋರ್ಸ್, ಬಟ್ಟೆ ಅಂಗಡಿ, ಬೇಕರಿ ಎಲ್ಲವನ್ನೂ ಬಂದ್ ಮಾಡಿಸಲಾಗುತ್ತಿದೆ. ಈ ನಿಯಮ ನಿನ್ನೆಯಿಂದಲೇ ಅನ್ವಯವಾಗಿದ್ದು, ಮೇ 4ರವರೆಗೆ ಅಸ್ತಿತ್ವದಲ್ಲಿರಲಿದೆ. ನಾಳೆ ಸಂಜೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತೆ. ಆದರೆ ಇಂದೇ ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ.!