ರಾಜ್ಯದಲ್ಲಿ ಕೊರೋನಾ ಸೋಂಕು ಎಷ್ಟು ಬೆಂಗಳೂರಿನಲ್ಲಿಯೇ ಅತೀ ಹೆಚ್ಚು.! - BC Suddi
ರಾಜ್ಯದಲ್ಲಿ ಕೊರೋನಾ ಸೋಂಕು ಎಷ್ಟು ಬೆಂಗಳೂರಿನಲ್ಲಿಯೇ ಅತೀ ಹೆಚ್ಚು.!

ರಾಜ್ಯದಲ್ಲಿ ಕೊರೋನಾ ಸೋಂಕು ಎಷ್ಟು ಬೆಂಗಳೂರಿನಲ್ಲಿಯೇ ಅತೀ ಹೆಚ್ಚು.!

ಬೆಂಗಳೂರು: ರಾಜ್ಯದಲ್ಲಿ ಇಂದು ಬರೋಬ್ಬರಿ 44,631ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೂಲಕ ರಾಜ್ಯದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 16,90,934ಕ್ಕೆ ಏರಿಕೆಯಾಗಿದೆ.

 ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಸರಣದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದೆ. ಈಗಂತೂ ಒಂದು ವಾರದಿಂದ ಈಚೆಗೆ ಒಂದು ದಿನದಲ್ಲಿ ದಾಖಲಾಗುವ ಪ್ರಕರಣಗಳು 40 ಸಾವಿರದ ಆಸುಪಾಸಿನಲ್ಲೇ ಇರುತ್ತವೆ. ಕರ್ಫ್ಯೂ, ನೈಟ್​ಕರ್ಫ್ಯೂದಂತಹ ಕಠಿಣ ಕ್ರಮ ಕೈಗೊಂಡಿದ್ದರೂ ಪ್ರಯೋಜನ ಆಗುತ್ತಿಲ್ಲ.

ಹಾಗೇ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 292ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊವಿಡ್​ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 16,538ಕ್ಕೆ ತಲುಪಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 12,10,013ಮಂದಿ ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 4,64,363 ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.