ವಿಶ್ವದೆಲ್ಲೆಡೆ ಭರ್ಜರಿ ಪ್ರದರ್ಶನ ಕಂಡು ದಾಖಲೆ ಬರೆದ ಕೆಜಿಎಫ್ ಚಾಪ್ಟರ್-2 ಸಿನಿಪ್ರಿಯರ ನಿದ್ದೆಗೆಡಿಸಿದೆ. ಇದರ ಮುಂದಿನ ಪಾರ್ಟ್ ಅಂದ್ರೆ ಕೆಜಿಎಫ್ ಚಾಪ್ಟರ್-3 ಬರತ್ತಾ ಬರಲ್ವಾ ಅನ್ನೋ ಹುಳ ಎಲ್ಲರ ತಲೆಗೆ ನುಗ್ಗಿತ್ತು. ಈ ವಿಚಾರವಾಗಿ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಸ್ಪಷ್ಟನೆ ನೀಡಿದ್ದು, ರಾಕಿ ಭಾಯ್ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

ಹಿಂದಿ ವಾಹಿನಿಯೊಂದರ ಸಂದರ್ಶನ ವೇಳೆ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತ ಸಲಾರ್‌ನಲ್ಲಿ ನಿರತರಾಗಿದ್ದಾರೆ. ಸುಮಾರು 30-35% ಚಿತ್ರೀಕರಣ ಮುಗಿದಿದೆ. ಮುಂದಿನ ಶೆಡ್ಯೂಲ್ ಮುಂದಿನ ವಾರ ಪ್ರಾರಂಭವಾಗಲಿದೆ. ಈ ವರ್ಷದ ಅಕ್ಟೋಬರ್-ನವೆಂಬರ್ ವೇಳೆಗೆ ಅದು ಪೂರ್ಣವಾಗಲಿದೆ. ಹಾಗಾಗಿ, ಈ ವರ್ಷದ ಅಕ್ಟೋಬರ್ ನಂತರ ಕೆಜಿಎಫ್ ಚಿತ್ರೀಕರಣವನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ. 2024 ರ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದಿದ್ದಾರೆ.