ದುಬೈ : ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ನೂತನ ಅಧ್ಯಕ್ಷರಾಗಿ ಅಬುದಾಬಿ ರಾಜಕುಮಾರ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಶನಿವಾರ ಆಯ್ಕೆಯಾದರು.

61 ವರ್ಷ ವಯಸ್ಸಿನ ಅವರು ದೇಶದ ಮೂರನೇ ಅಧ್ಯಕ್ಷರಾಗಿದ್ದಾರೆ. ಯುಎಇ ಅಧ್ಯಕ್ಷರಾಗಿದ್ದ 73 ವರ್ಷದ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ ನಿಧನ ಹೊಂದಿದ್ದರು. ಅವರ ನಿಧಾನಂತರ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇದೀಗ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಆಯ್ಕೆಯಾಗಿದ್ದಾರೆ.

ಮರು ಚುನಾವಣೆಗೂ ಮುನ್ನ ಐದು ವರ್ಷ ಕಾಲ ಅವರು ಕಚೇರಿಯನ್ನು ನಿರ್ವಹಿಸಲಿದ್ದಾರೆ.