ಯತ್ನಾಳ್ ಓರ್ವ ಕಾಂಗ್ರೆಸ್ ಏಜೆಂಟ್: ರೇಣುಕಾಚಾರ್ಯ..! - BC Suddi
ಯತ್ನಾಳ್ ಓರ್ವ ಕಾಂಗ್ರೆಸ್ ಏಜೆಂಟ್: ರೇಣುಕಾಚಾರ್ಯ..!

ಯತ್ನಾಳ್ ಓರ್ವ ಕಾಂಗ್ರೆಸ್ ಏಜೆಂಟ್: ರೇಣುಕಾಚಾರ್ಯ..!

 

ದಾವಣಗೆರೆ: ಯತ್ನಾಳ್ ಓರ್ವ ಕಾಂಗ್ರೆಸ್ ಏಜೆಂಟ್ ಹಾಗೇ ಮಾತನಾಡುತ್ತಿದ್ದಾನೆ. ಆತನ ಹೇಳಿಕೆ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಯತ್ನಾಳ್ ರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲು ನಾನು ಆಗ್ರಹಿಸಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಹೇಳಿದರು.

ಪಂಚರಾಜ್ಯಗಳ ಚುನಾವಣೆ ಬಳಿಕ ಸಿಎಂ ಬದಲಾವಣೆಯಾಗಲಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು ತಾಕತ್ತಿದ್ದರೆ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿ ನೋಡು ಎಂದು ಸವಾಲು ಹಾಕಿದ್ದಾರೆ.!

ಯತ್ನಾಳ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ರೇಣುಕಾಚಾರ್ಯ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅನಂತಕುಮಾರ್. ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ದು ಪ್ರಧಾನಿ ಮೋದಿ, ಅಮಿತ್ ಶಾ ಹೊರತು ನೀನಲ್ಲ. ನೀನು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತೀಯ ಎಂದು ಹೇಳಿದ್ದಾರೆ.

error: Content is protected !!