ಮೈಸೂರಿನಲ್ಲಿ ಮಿನಿ ಲಾಕ್‌ಡೌನ್‌? ಸುಳಿವು ಕೊಟ್ಟ ಡಿಸಿ ರೋಹಿಣಿ ಸಿಂಧೂರಿ - BC Suddi
ಮೈಸೂರಿನಲ್ಲಿ ಮಿನಿ ಲಾಕ್‌ಡೌನ್‌? ಸುಳಿವು ಕೊಟ್ಟ ಡಿಸಿ ರೋಹಿಣಿ ಸಿಂಧೂರಿ

ಮೈಸೂರಿನಲ್ಲಿ ಮಿನಿ ಲಾಕ್‌ಡೌನ್‌? ಸುಳಿವು ಕೊಟ್ಟ ಡಿಸಿ ರೋಹಿಣಿ ಸಿಂಧೂರಿ

ಮೈಸೂರು: ಜಿಲ್ಲೆಯಲ್ಲೂ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ಮಿನಿ ಲಾಕ್‌ಡೌನ್‌ ಮಾಡುವ ಚಿಂತನೆಯೂ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸುಳಿವು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ಮಿನಿ ಕಂಟೇನ್‌ಮೆಂಟ್‌ ವಲಯ ಮಾಡುವ ಯೋಚನೆ ಇದೆ. ಇದಕ್ಕೂ ಕಡಿಮೆಯಾಗದಿದ್ದರೆ ಮಿನಿ ಲಾಕ್‌ಡೌನ್‌ ಮಾಡುವ ಸಾಧ್ಯತೆಯೂ ಇರುತ್ತದೆ. ಇದನ್ನು ಜನರು ಅರಿತುಕೊಳ್ಳಬೇಕು. ಹಿಂದಿನ ಲಾಕ್‌ಡೌನ್‌ ಪರಿಸ್ಥಿತಿಗೆ ಹೋಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಆರಂಭವಾಗಿರುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಜನರು ಹೊರಗಡೆ ಹೋದಾಗ ಮಾಸ್ಕ್‌ ಧರಿಸಿ ಎಂದು ಸಲಹೆ ನೀಡಿದರು.

error: Content is protected !!