ಮೇ 2 ರೊಳಗೆ ಮುಖ್ಯ ಮಂತ್ರಿ ಬದಲಾವಣೆ… ಇಲ್ಲವಾದ್ರೆ……..: ಯತ್ನಾಳ್ - BC Suddi
ಮೇ 2 ರೊಳಗೆ ಮುಖ್ಯ ಮಂತ್ರಿ ಬದಲಾವಣೆ… ಇಲ್ಲವಾದ್ರೆ……..: ಯತ್ನಾಳ್

ಮೇ 2 ರೊಳಗೆ ಮುಖ್ಯ ಮಂತ್ರಿ ಬದಲಾವಣೆ… ಇಲ್ಲವಾದ್ರೆ……..: ಯತ್ನಾಳ್

ವಿಜಯಪುರ: ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ ಅವರು ಮೇ 2 ರೊಳಗೆ ಮುಖ್ಯಮಂತ್ರಿ ಬದಲಾವಣೆಯಾಗದಿದ್ದರೆ ಬಿಜೆಪಿಯಲ್ಲಿ ಭಾರಿ ಸ್ಪೋಟವಾಗಲಿದೆ ಎಂದು ಹೇಳಿದ್ದಾರೆ.

ಸಚಿವ ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ರಾಜ್ಯಾಧ್ಯಕ್ಷರಾಗಿ ಅನುಭವ ಹೊಂದಿದವರು. ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಈಶ್ವರಪ್ಪನವರ ಶ್ರಮ ಇದೆ ಎಂದು ಹೇಳಿದ್ದಾರೆ.

ಅಂಥವರು ಬೇಸತ್ತು ರಾಜ್ಯಪಾಲರಿಗೆ ದೂರು ನೀಡಿರುವುದು ತಪ್ಪಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಮುಖ್ಯಮಂತ್ರಿಗೆ ಬುದ್ಧಿವಾದ ಹೇಳಬೇಕಿತ್ತು. ಅದನ್ನು ಬಿಟ್ಟು ಈಶ್ವರಪ್ಪನವರ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

error: Content is protected !!