ಮೇ ನಲ್ಲಿ ನಡೆಯಬೇಕಿದ್ದ ಆಫ್ಲೈನ್ ಪರೀಕ್ಷೆಗಳು ಮುಂದಕ್ಕೆ..! - BC Suddi
ಮೇ ನಲ್ಲಿ ನಡೆಯಬೇಕಿದ್ದ ಆಫ್ಲೈನ್ ಪರೀಕ್ಷೆಗಳು ಮುಂದಕ್ಕೆ..!

ಮೇ ನಲ್ಲಿ ನಡೆಯಬೇಕಿದ್ದ ಆಫ್ಲೈನ್ ಪರೀಕ್ಷೆಗಳು ಮುಂದಕ್ಕೆ..!

ದೆಹಲಿ: ಮೇ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಆಫ್ಲೈನ್ (ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರೆಯುವ) ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಎಲ್ಲ ಶಿಕ್ಷಣಸಂಸ್ಥೆಗಳಿಗೂ ಪತ್ರದ ಮೂಲಕ ತಿಳಿಸಿದೆ.

ಶಿಕ್ಷಣ ಸಂಸ್ಥೆಗಳು ಮೇ ತಿಂಗಳಲ್ಲಿ ನಡೆಸಲು ಆಯೋಜಿಸಿದ್ದ ಆಫ್ಲೈನ್ ಪರೀಕ್ಷೆಗಳನ್ನು ಮುಂದೂಡಬೇಕು. ಆನ್ಲೈನ್ ಪರೀಕ್ಷೆಗಳನ್ನು ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ.

ಈ ಸೂಚನೆಯನ್ನು ದೇಶಾದ್ಯಂತ ಇರುವ ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಟೆಕ್ನಾಲಜಿ ಆಫ್ ಇಂಡಿಯನ್ ಇನ್ಸ್ಟಿಟ್ಯೂಟ್ಗಳು, ಟೆಕ್ನಾಲಜಿ ಆಫ್ ನ್ಯಾಷನಲ್ ಇನ್ಸ್ಟಿಟ್ಯೂಟ್ಗಳು ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೂ ಪಾಲಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಹಾಗೇ, ಆಫ್ಲೈನ್ ಪರೀಕ್ಷೆಗೆ ಸಂಬಂಧಪಟ್ಟ ನಿರ್ಧಾರಗಳನ್ನು ಜೂನ್ ಮೊದಲವಾರದಲ್ಲಿ ನಡೆಸಲಾಗುವ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

(ಸಾಂದರ್ಭಿಕ ಚಿತ್ರ)