ಮಿಸೌರಿ: ಲಾಸ್ ಏಂಜಲೀಸ್‌ನಿಂದ ಚಿಕಾಗೋಗೆ 243 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ರೈಲು ಡಂಪ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 3 ಮಂದಿ ಸಾವನ್ನಪ್ಪಿರುವ ಘಟನೆ ಮಿಸೌರಿಯ ದೂರದ ಪ್ರದೇಶದಲ್ಲಿ ನಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಹಳಿ ತಪ್ಪಿ ಏಳು ರೈಲು ಬೋಗಿಗಳು ಉರುಳಿ ಬಿದ್ದಿದ್ದು, ಇದರಿಂದಾಗಿ ಹಲವಾರು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ರೈಲಿನಲ್ಲಿದ್ದರು ಮತ್ತು ಒಬ್ಬರು ಟ್ರಕ್‌ನಲ್ಲಿದ್ದರು ಎಂದು ಮಿಸೌರಿ ಸ್ಟೇಟ್ ಹೈವೇ ಪೆಟ್ರೋಲ್ ವಕ್ತಾರ ಸಿಪಿಎಲ್. ಜಸ್ಟಿನ್ ಡನ್ ತಿಳಿಸಿದ್ದಾರೆ.