ಬೆಂಗಳೂರು: ಟೆಂಡರ್ ಪ್ಯೂರ್ ರಸ್ತೆ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಶೇ.53.86ರಷ್ಟು ಹೆಚ್ಚುವರಿ ಮೊತ್ತ ಪಾವತಿಸಿ ಅಕ್ರಮ ಎಸಗಿರುವುದಾಗಿ ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
‘ಸಿದ್ದರಾಮಯ್ಯ ವಿರುದ್ಧ ನಾವು ದಾಖಲೆ ಸಹಿತ ದೂರು ನೀಡಿದ್ದೇವೆ. ಆರೋಪಗಳಿಗೆ ಪುಷ್ಟಿ ನೀಡುವ 10-12 ದಾಖಲೆ ಕೂಡ ಸಲ್ಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಲೋಕಾಯುಕ್ತರು ನೀಡಿರುವುದಾಗಿ’ ಅವರು ಮಾಧ್ಯಮಕ್ಕೆ ತಿಳಿಸಿದರು.