ಮಹಾರಾಷ್ಟ್ರ; ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 47,288 ಹೊಸ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಶಿರಡಿ ಸಾಯಿಬಾಬಾ ಹಾಗೂ ಸಿದ್ದಿ ವಿನಾಯಕ ದೇವಸ್ಥಾನಗಳನ್ನು ಮುಚ್ಚಲಾಗಿದೆ.
ಈ ತಿಂಗಳ 30ರವರೆಗೆ ಸಾಯಿ ಬಾಬಾ ದೇಗುಲ ಮುಚ್ಚಲು ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ (ಎಸ್ಎಸ್ಟಿ) ನಿರ್ಧರಿಸಿದೆ. ಹಾಗೂ ಮುಂಬೈನ ಸಿದ್ಧಿ ವಿನಾಯಕ ದೇಗುಲವನ್ನು ಕೂಡ ಬಂದ್ ಮಾಡಲಾಗುವುದು ಎಂದು ದೇಗುಲ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.