ಮದುವೆ ಮಂಟಪ ಬುಕಿಂಗ್ ಗೆ ಡಿಸಿ ಅನುಮತಿ ಕಡ್ಡಾಯ: ಆರ್ ಅಶೋಕ್.! - BC Suddi
ಮದುವೆ ಮಂಟಪ ಬುಕಿಂಗ್ ಗೆ ಡಿಸಿ ಅನುಮತಿ ಕಡ್ಡಾಯ: ಆರ್ ಅಶೋಕ್.!

ಮದುವೆ ಮಂಟಪ ಬುಕಿಂಗ್ ಗೆ ಡಿಸಿ ಅನುಮತಿ ಕಡ್ಡಾಯ: ಆರ್ ಅಶೋಕ್.!

 

ಬೆಂಗಳೂರು : ಮದುವೆ ಸಮಾರಂಭ ಸೇರಿದಂತೆ ವಿವಿಧ ಸಮಾರಂಭಗಳಿಗೆ ಕಲ್ಯಾಣ ಮಂಟಪಗಳನ್ನು ಇನ್ಮುಂದೆ ಬುಕ್ ಮಾಡಬೇಕಾದ್ರೇ, ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಇಂದು ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ ಸಚಿವರು, ವಿವಿಧ ಅಧಿಕಾರಿಗಳು ಸಭೆ ನಡೆಸಲಾಯಿತು. ಇಂತಹ ಸಭೆಯಲ್ಲಿ ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಾಯಿತು ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಹೆಚ್ಚು ಹೆಚ್ಚು ಜನರು ಸೇರುವಂತ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಇದರ ನಡುವೆ ನಡೆಯುವಂತ ಮದುವೆ ಕಾರ್ಯಕ್ರಮಕ್ಕೆ ಜನರನ್ನು ನಿರ್ಬಂಧಿಸೋದಕ್ಕೂ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇನ್ಮುಂದೆ ಕಲ್ಯಾಣ ಮಂಟಪವನ್ನು ಬುಕ್ ಮಾಡಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ. ಈಗಾಗಲೇ ಕಲ್ಯಾಣ ಮಂಟಪ ಬುಕ್ ಮಾಡಿದ್ರೆ ಸಮಸ್ಯೆ ಇಲ್ಲ. ಇಂದು ಸಂಜೆಯಿಂದ ಯಾರು ಕಲ್ಯಾಣ ಮಂಟಪಗಳನ್ನು ಬುಕ್ ಮಾಡುತ್ತಾರೋ ಅವರೆಲ್ಲಾ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ಮದುವೆಯಲ್ಲಿ ಜನರನ್ನು ನಿಯಂತ್ರಿಸದೇ ಇದ್ದರೇ ಮದುವೆ ಮನೆಯವರ ವಿರುದ್ಧ ಎಫ್ ಐ ಆರ್ ದಾಖಲಾಸಲಾಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣದಿಂದಾಗಿ ನಿಷೇಧ ವಿದ್ದರೂ, ನಿಷೇಧದ ನಡುವೆ ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆದ್ರೇ ಅದಕ್ಕೆ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ. ಹೀಗಾಗಿ ಒಂದು ತಿಂಗಳು ಮೊದಲೇ ಸ್ಥಳ ಪರಿಶೀಲಿಸಿ ನಿರ್ಬಂಧಿಸಬೇಕು. ಪೊಲೀಸರಿಗೂ ಮಾಹಿತಿ ನೀಡಬೇಕು ಎಂದರು.