ಮತಎಣಿಕೆ ಅಭ್ಯರ್ಥಿ-ಏಜೆಂಟ್ರು ಆರ್ಟಿಪಿಸಿಆರ್ ಅಥವಾ ರ್ಯಾ ಪಿಡ್ ಆ್ಯಂಟಿಜೆನ್ ಟೆಸ್ಟ್ ಕಡ್ಡಾಯ.! - BC Suddi
ಮತಎಣಿಕೆ ಅಭ್ಯರ್ಥಿ-ಏಜೆಂಟ್ರು ಆರ್ಟಿಪಿಸಿಆರ್ ಅಥವಾ ರ್ಯಾ ಪಿಡ್ ಆ್ಯಂಟಿಜೆನ್ ಟೆಸ್ಟ್ ಕಡ್ಡಾಯ.!

ಮತಎಣಿಕೆ ಅಭ್ಯರ್ಥಿ-ಏಜೆಂಟ್ರು ಆರ್ಟಿಪಿಸಿಆರ್ ಅಥವಾ ರ್ಯಾ ಪಿಡ್ ಆ್ಯಂಟಿಜೆನ್ ಟೆಸ್ಟ್ ಕಡ್ಡಾಯ.!

ದೆಹಲಿ: ಮತಎಣಿಕೆ ಕೇಂದ್ರಗಳಿಗೆ ಅಭ್ಯರ್ಥಿ ಅಥವಾ ಏಜೆಂಟರು ಪ್ರವೇಶಿಸಲು ಚುನಾವಣಾ ಆಯೋಗವು ಕೆಲ ಷರತ್ತುಗಳನ್ನು ವಿಧಿಸಿದೆ. ಆರ್ಟಿಪಿಸಿಆರ್ ಅಥವಾ ರ್ಯಾ ಪಿಡ್ ಆ್ಯಂಟಿಜೆನ್ ಟೆಸ್ಟ್ (ಆರ್ಎಟಿ) ನಂತರವೇ ಕೇಂದ್ರಗಳಿಗೆ ಪ್ರವೇಶಕ್ಕೆ ಅನುಮತಿ.

ಕರ್ನಾಟಕ : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ  ಮಂಗಳ ಸುರೇಶ ಅಂಗಡಿ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ ಅವರು ಈ ಬಾರಿ ಮತಎಣಿಕೆ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಸಿಗುವುದಿಲ್ಲ.!

ಒಟ್ಟಾರೆ ಮತಎಣಿಕೆ ಕೇಂದ್ರಗಳಿಗೆ  ಎಂಟ್ರಿ ಆಗುವವರು ಕಡ್ಡಾಯವಾಗಿ  2 ಡೋಸ್ ಲಸಿಕೆ ಪಡೆದುಕೊಂಡಿರಬೇಕು. ಮತಎಣಿಕೆ ಆರಂಭವಾಗುವ 48 ಗಂಟೆಗಳ ಒಳಗೆ ಕೊರೊನಾ ಸೋಂಕು ತಪಾಸಣೆಯ ನೆಗೆಟಿವ್ ರಿಪೋರ್ಟ್ ಅಥವಾ ಲಸಿಕೆ ಪಡೆದ ಪ್ರಮಾಣಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಆಯೋಗವು ಸ್ಪಷ್ಟಪಡಿಸಿದೆ.

.