'ಮಂಚದಲ್ಲಿ ಮಂಚದ ಕೆಲಸ ಮಾಡೋದು ಬಿಟ್ಟು ರಾಜಕೀಯ ಬೇಕಿತ್ತಾ?' - ಡಿ.ಕೆ. ಶಿವಕುಮಾರ್ - BC Suddi
‘ಮಂಚದಲ್ಲಿ ಮಂಚದ ಕೆಲಸ ಮಾಡೋದು ಬಿಟ್ಟು ರಾಜಕೀಯ ಬೇಕಿತ್ತಾ?’ – ಡಿ.ಕೆ. ಶಿವಕುಮಾರ್

‘ಮಂಚದಲ್ಲಿ ಮಂಚದ ಕೆಲಸ ಮಾಡೋದು ಬಿಟ್ಟು ರಾಜಕೀಯ ಬೇಕಿತ್ತಾ?’ – ಡಿ.ಕೆ. ಶಿವಕುಮಾರ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ವಿಧಾನಸಭೆಯಲ್ಲಿ ಸೋಮವಾರ ಆಡಳಿತ ಪಕ್ಷ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಗ್ವಾಧಕ್ಕೆ ಕಾರಣವಾಯಿತು.

ಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಯಲ್ಲಾಪುರ-ಮುಂಡಗೋಡ ಶಾಸಕ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಿಡಿ ಕುರಿತು ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸಿಡಿ ಪ್ರಕರಣ ಸಮಗ್ರವಾಗಿ ತನಿಖೆ ಆಗಬೇಕು ಎಂದು ಹೇಳಿದರು.

“ಯಡಿಯೂರಪ್ಪ ದೊಡ್ದ ಭ್ರಷ್ಟ. ಸಿದ್ದರಾಮಯ್ಯ ಬಹಳ ಒಳ್ಳೆಯವರು. ಹೀಗೆಲ್ಲಾ ಮಾತನಾಡಿದ್ದಾರೆ. ಕನ್ನಡಿಗರ ಬಗ್ಗೆ ಕೆಟ್ಟದಾಗಿ ಅವಾಚ್ಯ ಪದಬಳಸಿ ಮಾತಾಡಿದ್ದಾರೆ. ಮರಾಠಿಗರನ್ನು ಹೊಗಳಿದ್ದಾರೆ. ಜಾರಕಿಹೊಳಿ ಮಂಚದಲ್ಲಿ ಮಾಧ್ಯಮದವರ ಬಗ್ಗೆ, ಪ್ರಲ್ಹಾದ್ ಜೋಶಿ ಬಗ್ಗೆಯೂ ಮಾತನಾಡಿದ್ದಾರೆ. ಇದೆಲ್ಲಾ ಬೇಕಿತ್ತಾ” ಎಂದರು.

ಇದಲ್ಲದೆ ಸಿ.ಡಿ ಪ್ರಕರಣ ಹೈಕೋರ್ಟ್ ನ ಹಾಲಿ ಮುಖ್ಯ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು , ಮತ್ತು ಆರು ಜನ ಸಚಿವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷದ ಸದಸ್ಯರು ಆಗ್ರಹಿಸಿದರು.

ಗೃಹ ಸಚಿವ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ  ನಡೆಸಿದರು. ಕೊನೆಗೆ ಸ್ಪೀಕರ್ ವಿಶ್ವೆಶ್ವರ ಹೆಗಡೆ ಕಾಗೇರಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

error: Content is protected !!