ಗುವಾಹಟಿ: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಎಲ್‌ಎಸಿ ಬಳಿ ನಾಪತ್ತೆಯಾದ ಯುವಕ ತಮ್ಮ ವಶದಲ್ಲಿರುವುದಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ. ಕಳೆದ ಮೂರು ದಿನಗಳ ಹಿಂದೆ ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ 17 ವರ್ಷದ ಮಿರಾಮ್ ಟ್ಯಾರನ್‌ ಚೀನಾ ವಶದಲ್ಲಿರುವ ಯುವಕ ಆಗಿರಬಹುದು ಎಂದು ಶಂಕಿಸಲಾಗಿದೆ.

ಪಿಎಲ್‌ಎ ವಶಪಡಿಸಿಕೊಂಡಿದ್ದ ಹುಡುಗನ ಬಿಡುಗಡೆ ಮಾಡುವ ಮತ್ತು ಹಿಂದಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಭಾನುವಾರ ಭಾರತೀಯ ಸೇನೆಗೆ ತಿಳಿಸಿತ್ತು. ಈ ಬಗ್ಗೆ ತೇಜ್​ಪುರ್ ಡಿಫೆನ್ಸ್​ ಪಿಆರ್​ಒ ಲೆಫ್ಟಿನೆಂಟ್ ಕರ್ನಲ್​ ಹರ್ಷವರ್ಧನ್​ ಪಾಂಡೆ ಪ್ರತಿಕ್ರಿಯೆ ನೀಡಿದ್ದು, ಪಿಎಲ್‌ಎ ಅವರು ಭಾರತಿಯ ಕೌಂಟರ್ಪಾರ್ಟ್‌‌ ಅನ್ನು ಸಂಪರ್ಕಿಸಿದ್ದು, ಆ ಹುಡುಗನನ್ನು ನಾವು ಕಂಡುಕೊಂಡಿದ್ದೆವೆ ಎಂದು ಅವರು ಖಚಿತಪಡಿಸಿದ್ದು. ಆದರೆ ಅವನು ಮಿರಾಮ್ ಟ್ಯಾರನ್‌ ಎಂಬುದು ಇನ್ನು ಖಚಿತಪಡಿಸಿಲ್ಲ, ಟ್ಯಾರನ್‌ ಅಪಹರಣವು ಗಣರಾಜ್ಯೋತ್ಸವದ ಆಚರಣೆಯ ಮೊದಲೆ ರಾಷ್ಟೀಯ ರಾಜಕೀಯದಲ್ಲಿ ಭಾರಿ ಕೋಲಾಹಲವನ್ನು ಉಂಟುಮಾಡಿತ್ತು.

ಭಾರತೀಯ ಸೇನೆ ಅಥವಾ ಕೇಂದ್ರ ರಕ್ಷಣಾ ಸಚಿವಾಲಯ ಈ ಬಗ್ಗೆ ಅಧಿಕೃತ ವಿವರಗಳನ್ನು ಬಹಿರಂಗ ಪಡಿಸಿಲ್ಲ, ಪ್ರೋಟೋಕಾಲ್ ಪ್ರಕಾರ ಹುಡುಗನ ಹಸ್ತಾಂತರವು ಸ್ವಲ್ಪ ಸಮಯ ತೆಗೆದುಕೊಳ್ಳತದೆ ಎಂದು ಸೇನ ಮೂಲಗಳು ತಿಳಿಸಿದೆ. ಆದರೆ ಪಿಎಲ್‌ಎ ವಶಪಡಿಸಿಕೊಂಡಿದ್ದ ವ್ಯಕ್ತಿ ಯಾರೆಂಬುದು ಇನ್ನು ಮಾಹಿತಿ ತೊರೆತಿಲ್ಲ.

ಇದಕ್ಕೂ ಮೊದಲು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ರಕ್ಷಣಾ ಸಚಿವಾಲಯವು ಟ್ಯಾರನ್‌ನನ್ನು ಪತ್ತೆ ಹಚ್ಚಿ ಮತ್ತು ಮರಳಿ ಭಾರತಕ್ಕೆ ಕರೆತರಲು ಚೀನಾದೊಂದಿಗೆ ರಾಜತಾಂತ್ರಿಕ ಸಮಿತಿಯು ಸಕ್ರಿಯವಾಗಿ ಸಂಪರ್ಕದಲ್ಲಿದೆ ಎಂದು ಹೇಳಿದ್ದರು.

2020ರ ಸೆಪ್ಟೆಂಬರ್​​ನಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿತ್ತು. ಅರುಣಾಚಲ ಪ್ರದೇಶದ ಅಪ್ಪರ್​ ಸುಬಾನ್ಸಿರಿ ಜಿಲ್ಲೆಯ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿತ್ತು. ಒಂದು ವಾರದ ಬಳಿಕ ಬಿಡುಗಡೆ ಮಾಡಿತ್ತು. ಇನ್ನು ಈ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯು, ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವು ಯಾಕೆ ಎಂದು ಪ್ರಶ್ನಿಸಿದ್ದರು. ಇನ್ನು ಬಾಲಕನ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡದ ಕೇಂದ್ರ ಮತ್ತು ರಕ್ಷಣಾ ಸಚಿವಾಲಯದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಿಎಂ ನಬಮ್ ತುಕಿ ವಾಗ್ದಾಳಿ ನಡೆಸಿದ್ದಾರೆ.

ಭಾರತ ಮತ್ತು ಚೀನಾ ದೇಶಗಳು ಲಡಾಖ್​ನಿಂದ ಅರುಣಾಚಲ ಪ್ರದೇಶದವರೆಗೆ ಸುಮಾರು 3400 ಕಿಮೀ ಉದ್ದದ ವಾಸ್ತವ ನಿಯಂತ್ರಣ ಗಡಿರೇಖೆ ಯನ್ನು ಹೊಂದಿದ್ದು. ಎರಡೂ ಸೇನೆಗಳ ನಡುವೆ ಗಡಿಯಲ್ಲಿ ಆಗಾಗ ಉಂಟಾಗುತ್ತಿರುವ ಸಂಘರ್ಷದ ನಿವಾರಣೆ ಸಂಬಂಧ  ಎರಡೂ ದೇಶಗಳ ನಡುವೆ ಈಗಾಗಲೇ 14 ಸುತ್ತುಗಳ ಮಿಲಿಟರಿ ಹಂತದ ಮಾತುಕತೆಗಳು ನಡೆದಿವೆ.