ವಾಷಿಂಗ್ಟನ್:  ಭಾರತೀಯ ಮೂಲದ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಅವರಿಗೆ ‘ವಿಶೇಷ ನಾಯಕತ್ವ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ರಾಜಾ ಕೃಷ್ಣಮೂರ್ತಿ ಅವರ ಅತ್ಯುತ್ತಮ ವೃತ್ತಿ ಮತ್ತು ಸಾರ್ವಜನಿಕ ಸೇವೆಗೆ ಸಮರ್ಪಣೆಯನ್ನು ಗುರುತಿಸಿ ʻವಿಶೇಷ ನಾಯಕತ್ವʼ ಪ್ರಶಸ್ತಿಯನ್ನು ನೀಡಲಾಗಿದೆ. ಡೆಮಾಕ್ರಟಿಕ್ ನಾಯಕನಾಗಿರುವ ರಾಜಾ ಕೃಷ್ಣಮೂರ್ತಿ ಅವರು 2017 ರಿಂದ ಇಲಿನಾಯ್ಸ್‌ನ 8 ನೇ ಕಾಂಗ್ರೆಷನಲ್ ಜಿಲ್ಲೆಯ ಯುಎಸ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಇಲಿನಾಯಿಸ್‌ನ ಮುಖ್ಯ ಕಾರ್ಯದರ್ಶಿ ಜೆಸ್ಸಿ ವೈಟ್‌ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕೃಷ್ಣಮೂರ್ತಿ, ಈ ಪ್ರಶಸ್ತಿಯನ್ನು ಪಡೆಯುವುದು ನಿಜವಾದ ಗೌರವ. ಈ ಪ್ರಶಸ್ತಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.