ಚಿತ್ರದುರ್ಗ : 2022-23ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರು ಹೆಚ್ಚು ಮಳೆಯಿಂದ ಬೆಳೆನಷ್ಟ ಉಂಟಾದಲ್ಲಿ ವಿಮಾ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು ಬೆಳೆಯುವ ಹಂತದಲ್ಲಿದ್ದು, ಜುಲೈ ಮಾಹೆಯ ಅಂತ್ಯದಲ್ಲಿ ಮತ್ತು ಆಗಸ್ಟ್ ಮಾಹೆಯ ಮೊದಲ ವಾರದಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮದಿಂದ ಬೆಳೆನಷ್ಟ ಉಂಟಾಗುವ ಸಂಭವವಿರುತ್ತದೆ.

ಆದ್ದರಿಂದ ಬೆಳೆವಿಮೆ ಮಾಡಿಸಿರುವ ರೈತರು ಬೆಳೆನಷ್ಟ ಸಂಭವಿಸಿದ್ದಲ್ಲಿ 72 ಗಂಟೆಯೊಳಗಾಗಿ ನೇರವಾಗಿ ಪಿ.ಎಂ.ಎಫ್.ಬಿ.ವೈ ಅನುμÁ್ಠನಗೊಳಿಸುತ್ತಿರುವ ಯೂನಿವರ್ಸಲ್ ಸೋಂಪೊ ಜನರಲ್ ಇನ್ಸೂರೆನ್ಸ್ ವಿಮಾ ಕಂಪನಿ ಕಛೇರಿಗಳಿಗೆ ಸಂಪರ್ಕಿಸಬಹುದು. (ಯೂನಿವರ್ಸಲ್ ಸೋಂಪೋ ಜನರಲ್ ಇನ್ಸೂರೆನ್ಸ್ ಕಂಪನಿ, ತಾಲ್ಲೂಕು ಪ್ರತಿನಿಧಿ ರಾಜಶೇಖರ್ ಮೊಬೈಲ್ ಸಂಖ್ಯೆ 6361135066, ಚಿತ್ರದುರ್ಗ ಜಿಲ್ಲಾ ಪ್ರತಿನಿಧಿ ಬಾಲರಾಜ್ ಮೊಬೈಲ್ ಸಂಖ್ಯೆ 7400446312) ಅಥವಾ ಟೋಲ್ ಫ್ರೀ ಸಂಖ್ಯೆ 1800-200-5142ಗೆÉ ಕರೆ ಮಾಡಿ ದೂರನ್ನು ದಾಖಲಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.