ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ ಬೆಂಗಳೂರಿನಲ್ಲಿ ಒಟ್ಟು 247 ಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಬಿಇ, ಬಿಟೆಕ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಜನವರಿ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)​ನ ಅಧಿಕೃತ ವೆಬ್​ಸೈಟ್​ bel-india.in ಗೆ ಭೇಟಿ ನೀಡಿ.

ಹುದ್ದೆಯ ಮಾಹಿತಿ:
ಪ್ರಾಜೆಕ್ಟ್​ ಎಂಜಿನಿಯರ್- 67
ಟ್ರೇನಿ ಎಂಜಿನಿಯರ್- 169
ಟ್ರೇನಿ ಆಫೀಸರ್- 11
ಒಟ್ಟು 247 ಹುದ್ದೆಗಳು

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್/ ಬಿಎಸ್ಸಿ/ ಎಂಬಿಎ​ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಪ್ರಾಜೆಕ್ಟ್​ ಎಂಜಿನಿಯರ್ -32 ವರ್ಷ
ಟ್ರೇನಿ ಎಂಜಿನಿಯರ್- 28 ವರ್ಷ
ಟ್ರೇನಿ ಆಫೀಸರ್- 28 ವರ್ಷ

ಕೆಲಸದ ಸ್ಥಳ: ಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ: ಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 30,000-55,000 ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:
ಟ್ರೇನಿ ಎಂಜಿನಿಯರ್ ಹುದ್ದೆಗೆ ಸಾಮಾನ್ಯ, ಒಬಿಸಿ & EWS ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಕಟ್ಟಬೇಕು.
SC/ST/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗೆ ಸಾಮಾನ್ಯ, ಒಬಿಸಿ & EWS ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಕಟ್ಟಬೇಕು.
SC/STPWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/02/2022

ಆಯ್ಕೆ ಪ್ರಕ್ರಿಯೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ