ಬೆಂಗಳೂರು: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಒಂದು ಹಂತ ತಲಯಪಿದಂತೆ ಕಾಣುತ್ತಿದೆ. ಸಿಐಡಿಯ ತನಿಖಾಧಿಕಾರಿಗಳಿಂದ ಹಿಂದಿನ ನೇಮಕಾತಿ ಎಡಿಜಿಪಿ ಅಮೃತ್ ಪೌಲ್ ಅವರನ್ನು ಎರಡನೇ ಬಾರಿಗೆ ವಿಚಾರಣೆ ನಡೆಸಲಾಗುತ್ತಿದೆ.

ನೇಮಕಾತಿ ವಿಭಾಗದಲ್ಲಿ ಅಮ್ರಿತ್​ ಪೌಲ್ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ ಹಗರಣ ನಡೆದಿತ್ತು. ಈ ಸಂಬಂಧ ಅಮೃತ್ ಪೌಲ್ ಆಪ್ತ ಅಧಿಕಾರಿ ಡಿವೈಎಸ್‌ಪಿ ಶಾಂತರಾಜುನನ್ನ ಸಿಐಡಿ ಇಗಾಗ್ಲೆ ಬಂಧಿಸಿದೆ. ಶಾಂತಕುಮಾರ್ ಹೇಳಿಕೆ ಮೇಲೆ ಸದ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರೋ ಅಮೃತ್ ಪೌಲ್ ಅವರನ್ನು ಈ ಹಿಂದೆ ಕೂಡ ಎರಡು ದಿನ ವಿಚಾರಣೆ ನಡೆಸಲಾಗಿತ್ತು. ಸದ್ಯ ಈ ಕೇಸ್‌ನಲ್ಲಿ ಇನ್ನಷ್ಟು ಆರೋಪಿಗಳು ಬಂಧನವಾಗಿದ್ದು, ಬಂಧಿತರ ಸಂಖ್ಯೆ ನಲವತ್ತರ ಗಡಿ ದಾಟಿದೆ. ಇವರುಗಳ ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷ್ಯಾಧಾರಗಳ ಹಿನ್ನೆಲೆ ಸಿಐಡಿ ಎಡಿಜಿ ಉಮೇಶ್ ಕುಮಾರ್ ಸಮ್ಮುಖದಲ್ಲಿ ಡಿವೈಎಸ್ಪಿ ಶೇಖರ್ ಅಮೃತ್ ಪೌಲ್ ಅವರನ್ನು ವಿಚಾರಣೆ ನಡೆಸ್ತಿದ್ದಾರೆ.