ಬೆಂಗಳೂರು: ‘ಒಮಿಕ್ರಾನ್’ ಭೀತಿ ಎಲ್ಲೆಡೆ ವ್ಯಾಪಿಸಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾದಿಂದ ಬಂದ 30 ಜನರಲ್ಲಿ 10 ಪ್ರಯಾಣಿಕರ ಪತ್ತೆ ಕಾರ್ಯ ಇನ್ನೂ ಆಗಿಲ್ಲ.‌

ವಿದೇಶದಿಂದ ಬಂದ ಬಹುತೇಕರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ ಮತ್ತಷ್ಟು ಆತಂಕ ಹೆಚ್ಚಲು ಕಾರಣವಾಗಿದೆ. ಈಗಾಗಲೇ ಒಮಿಕ್ರಾನ್ ವೈರಸ್ ಸಾಕಷ್ಟು ಬೇಗ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಈ ನಡುವೆ ವಿದೇಶದಿಂದ ಬೆಂಗಳೂರಿಗೆ ಬಂದವರ ಪೈಕಿ 10 ಮಂದಿಯ ಸಂಪರ್ಕ ದೊರೆಯುತ್ತಿಲ್ಲ ಎಂದು ಬಿಬಿಎಂಪಿ ಹೇಳುತ್ತಿದೆ.

ಈ ಬಗ್ಗೆ ಮಾಹಿತಿಯನ್ನು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರಲ್ಲಿ ಕೇಳಿದಾಗ ‘ಒಮಿಕ್ರಾನ್’ ಹೆಚ್ಚಿರುವ ದೇಶದಿಂದ ನಗರಕ್ಕೆ ಬಂದ 10 ಜನರ ಅಡ್ರೆಸ್ ಪತ್ತೆ ಮಾಡಲಾಗುತ್ತಿಲ್ಲ ಎಂದಿದ್ದಾರೆ.