ಮಧ್ಯಪ್ರದೇಶ: ಕೆಲವು ರಾಜ್ಯಗಳಲ್ಲಿ ಗಲಭೆಕೋರರ ಆಸ್ತಿಗಳನ್ನು ಧ್ವಂಸ ಮಾಡಲು ಬುಲ್ಡೋಜರ್‌ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರೆ, ಮಧ್ಯಪ್ರದೇಶದ ಬೆತುಲ್‌ನಲ್ಲಿ ವರನೊಬ್ಬ ತನ್ನ ಮದುವೆಯ ಮೆರವಣಿಗೆಗೆ ಕುದುರೆ ಅಥವಾ ಕಾರಿನ ಬದಲಿಗೆ ಬುಲ್ಡೋಜರ್‌ನಲ್ಲಿ ಬಂದು ಸುದ್ದಿಯಲ್ಲಿದ್ದಾನೆ.

ಬೆತುಲ್ ಜಿಲ್ಲೆಯ ಭೈನ್ಸ್‌ದೇಹಿ ತೆಹಸಿಲ್‌ನ ಜಲ್ಲಾರ್ ಗ್ರಾಮದಲ್ಲಿ ಬುಧವಾರ ನಡೆದ ವಿವಾಹ ಮೆರವಣಿಗೆಗಾಗಿ ವರ ಅಂಕುಶ್ ಜೈಸ್ವಾಲ್ ಬುಲ್ಡೋಜರ್‌ನಲ್ಲಿ ಬಂದಿದ್ದಾರೆ.ಈ ಮದುವೆ ಮೆರವಣಿಗೆಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಜೈಸ್ವಾಲ್ ಅವರು ತಮ್ಮ ವೃತ್ತಿಯ ಭಾಗವಾಗಿ ಬುಲ್ಡೋಜರ್‌ಗಳು ಸೇರಿದಂತೆ ನಿರ್ಮಾಣಕ್ಕೆ ಸಂಬಂಧಿಸಿದ ಯಂತ್ರಗಳೊಂದಿಗೆ ಪ್ರತಿದಿನ ಕೆಲಸ ಮಾಡುತ್ತಿದ್ದರು . ನನ್ನ ಮದುವೆಯಲ್ಲಿ ಅಂತಹ ವಾಹನ, ಸಲಕರಣೆಗಳ ಬಳಸಿ ಸ್ಮರಣೀಯ ಘಟನೆಯನ್ನಾಗಿ ಮಾಡಬೇಕುಎಂದು ಬುಲ್ಡೋಜರ್‌ ಬಳಸಿದ್ದೇನೆ. ಎಂದು ಜೈಸ್ವಾಲ್ ಹೇಳಿದ್ದಾರೆ.

ಈ ವಿವಾಹ ಸಮಾರಂಭಕ್ಕಾಗಿ ಬುಲ್ಡೋಜರ್‌ನ ಲೋಡರ್ ಬಕೆಟ್ ಅನ್ನು ಸುಂದರವಾಗಿ ಅಲಂಕರಿಸಲಾಗಿಮದುವೆಯ ಮೆರವಣಿಗೆಯಲ್ಲಿ ನಾನು ಅದರ ಮೇಲೆ ಆರಾಮವಾಗಿ ಕುಳಿತುಕೊಂಡು ಸಾಗಿದ್ದೇನೆ ” ಎಂದು ಜೈಸ್ವಾಲ್ ಹೇಳಿದ್ದಾರೆ.