ಕಳೆದ ತಿಂಗಳುಗಳಿಂದ ಯುಎಇಯ ಅಬುಧಾಬಿ ಮೇಲೆ ಯೆಮನ್​​​ನ ಹೌತಿ ಬಂಡುಕೋರರು ಭೀಕರ ದಾಳಿ ನಡೆಸುತ್ತಿದ್ದು, ಅಶಾಂತತೆ ಸೃಷ್ಟಿಯಾಗಿದೆ. ಈ ನಡುವೆ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂದೇ ಪ್ರಸಿದ್ಧಿ ಪಡೆದಿರುವ ಬುರ್ಜ್​ ಖಲೀಫಾವನ್ನು ಹೊಡೆದುರುಳಿಸುತ್ತೇವೆ ಅಂತ ಸಾಮಾಜಿಕ ಜಾಲತಾಣ ಹಾಗೂ ವೈಬ್​​ಸೈಟ್​​​ಗಳಲ್ಲಿ ಬೆದರಿಕೆಯನ್ನು ಹಾಕಿದ್ದಾರೆ.

ಇದೇ ತಿಂಗಳ 17 ರಂದು ಮೊದಲ ಬಾರಿಗೆ ಹೌತಿ ಬಂಡುಕೋರರು ಅಬುಧಾಬಿ ಮೇಲೆ ಡ್ರೋನ್​​ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಇಬ್ಬರು ಭಾರತೀಯರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಹೌತಿ ಬಂಡುಕೋರರು ದಾಳಿಯ ಹೊಣೆ ಹೊತ್ತುಕೊಂಡು, ಯುಇಎ ಬೆಂಬಲಿತ ಪಡೆಗಳು ಯೆಮೆನ್​​ ಮೇಲೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ದಾಳಿ ನಡೆಸಿದ್ದೇವೆ ಎಂದಿದ್ದರು. ಇದೀಗ ಬುರ್ಜ್ ಖಲೀಫಾ ಕೆಡುಗುವ ಬೆದರಿಕೆ ಹಾಕಿದ್ದಾರೆ.