ಬಿಸಿಲಿನ ತಾಪಮಾನ: ಈ ಜಿಲ್ಲೆಗಳಲ್ಲಿ ಸರಕಾರಿ ಕೆಲಸದ ಸಮಯ ಬದಲಾವಣೆ.! - BC Suddi
ಬಿಸಿಲಿನ ತಾಪಮಾನ: ಈ ಜಿಲ್ಲೆಗಳಲ್ಲಿ ಸರಕಾರಿ ಕೆಲಸದ ಸಮಯ ಬದಲಾವಣೆ.!

ಬಿಸಿಲಿನ ತಾಪಮಾನ: ಈ ಜಿಲ್ಲೆಗಳಲ್ಲಿ ಸರಕಾರಿ ಕೆಲಸದ ಸಮಯ ಬದಲಾವಣೆ.!

ಬೆಂಗಳೂರು: ಬಿಸಿಲಿನ ತಾಪಮಾನದ ಕಾರಣಕ್ಕಾಗಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹಗಲಿನ ವೇಳೆ ಹೊರಬೀಳುವುದು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡು ವಿಭಾಗಗಳ 9 ಜಿಲ್ಲೆಗಳಲ್ಲಿ ಸರ್ಕಾರಿ ಕೆಲಸದ ಸಮಯವನ್ನು ಬದಲಿಸಿದೆ.

ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ, ಕಲಬುರಗಿ ವಿಭಾಗದ ರಾಯಚೂರು, ಕಲಬುರಗಿ, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಮತ್ತು ಬೀದರ್ ಜಿಲ್ಲೆಗಳಲ್ಲಿ ಇಂದಿನಿಂದ ಕಚೇರಿ ಅವಧಿ ಬೆಳಗ್ಗೆ 8ರಿಂದ ಮಧ್ಯಾಹ್ನ 1-30 ರ ವರೆಗೆ ನಿಗದಿಪಡಿಸಲಾಗಿದೆ.