ಬಾಂಗ್ಲಾದೇಶ: ದುರ್ಗಾ ಪೂಜೆ ಆಚರಣೆಯ ವೇಳೆ ನಡೆದ ಕೋಮು ಗಲಭೆಯಲ್ಲಿ ಪೊಲೀಸರು, ಪತ್ರಕರ್ತರು ಹಾಗೂ ಸಾಮಾನ್ಯ ಮಂದಿ ಸೇರಿದಂತೆ 3 ಮಂದಿ ಸಾವನ್ನಪ್ಪಿ, 60ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಚಂದ್‌‌ಪುರದ ಹಾಜಿಗಂಜ್‌‌ ಅಪ್ಜಿಲ್ಲಾದಲ್ಲಿ ನಡೆದಿದೆ.

ಕುಮಿಲ್ಲಾದಲ್ಲಿ ಈ ಹಿಂದೆ ಪೂಜಾ ಮಂಟಪದಲ್ಲಿ ಪವಿತ್ರ ಕುರಾನ್‌ ಅನ್ನು ಅಪಮಾನಗೊಳಿಸಲಾಗಿದೆ ಎನ್ನುವ ವರದಿಗಳ ಬಗ್ಗೆ ನನುವಾ ದಿಶಿರ್ಪರ್‌ ಪ್ರದೇಶದಲ್ಲಿ ಧಾರ್ಮಿಕ ತೀವ್ರಗಾಮಿಗಳ ಹಾಗೂ ಹಿಂದೂಗಳ ನಡುವೆ ಘರ್ಷಣೆ ಉಂಟಾದ ಕಾರಣ 50 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಧಾರ್ಮಿಕ ತೀವ್ರಗಾಮಿಗಳು ಮಂಟಪ ಪ್ರದೇಶಕ್ಕೆ ಬಂದರು, ಹಿಂದೂ ಭಕ್ತರು ದುರ್ಗಾ ಪೂಜೆ ಆಚರಿಸುತ್ತಿದ್ದ ಮಂಟಪಕ್ಕೆ ಕಾನೂನು ಜಾರಿ ಸಂಸ್ಥೆಗಳ ಸದಸ್ಯರು ಕೆಲವೇ ಸಮಯದಲ್ಲಿ ಆಗಮಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಪರಿಸ್ಥಿತಿ ಶಮನಗೊಳಿಸುವ ಸಲುವಾಗಿ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಅಧೀಕ್ಷಕರು ಸ್ಥಳೀಯ ಹಿಂದೂ ಸಮುದಾಯ ಮತ್ತು ಇತರರೊಂದಿಗೆ ಸಭೆ ನಡೆಸಿದರು. ಈ ಸಂದರ್ಭ ವಿವಿಧ ಮುಸ್ಲಿಂ ಧಾರ್ಮಿಕ ಸಂಘಟನೆಗಳ ಬ್ಯಾನರ್‌ಗಳ ಅಡಿಯಲ್ಲಿ ಹಲವಾರು ಗುಂಪುಗಳು ನನುವಾ ದಿಗಿರ್ಪರ್ ನಲ್ಲಿ ಜಮಾಯಿಸಿದವು. ಸಭೆ ನಡೆಯುತ್ತಿರುವಾಗ, ಬೆಳಿಗ್ಗೆ 10.30ರ ಸುಮಾರಿಗೆ ಗುಂಪು ಮಂಟಪದ ಮೇಲೆ ದಾಳಿ ನಡೆಸಿತು ಎಂದು ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರದ ಬಳಿಕ ಅಧಿಕಾರಿಗಳು ಹಾಜಿಗಂಜ್‌ನಲ್ಲಿ ಸೆಕ್ಷನ್‌ 144 ಅನ್ನು ಜಾರಿಗೊಳಿಸಿದರು. ಕಾನೂನು ಹಾಗೂ ಸುವ್ಯವಸ್ಥೆ ಪುನಃಸ್ಥಾಪಿಸಲು ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶದ ಎಂಟು ತುಕಡಿಗಳನ್ನು ನಿಯೋಜಿಸಲಾಗಿದೆ.