ಬಂದ್ …ಬಂದ್  ಶನಿವಾರ –ಭಾನುವಾರ ಏನಿರುತ್ತೆ.! ಮೇ 4 ರವರೆಗೆ ಈ ಅಂಗಡಿಗಳು ಬಂದ್.! - BC Suddi
ಬಂದ್ …ಬಂದ್  ಶನಿವಾರ –ಭಾನುವಾರ ಏನಿರುತ್ತೆ.! ಮೇ 4 ರವರೆಗೆ ಈ ಅಂಗಡಿಗಳು ಬಂದ್.!

ಬಂದ್ …ಬಂದ್  ಶನಿವಾರ –ಭಾನುವಾರ ಏನಿರುತ್ತೆ.! ಮೇ 4 ರವರೆಗೆ ಈ ಅಂಗಡಿಗಳು ಬಂದ್.!

 

ಬೆಂಗಳೂರು: ರಾಜ್ಯದಲ್ಲಿ ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವನ್ನು ಬಂದ್ ಮಾಡಿಸಲಾಗುತ್ತಿದೆ. ಬಟ್ಟೆಯಂಗಡಿ, ಇಲೆಕ್ಟ್ರಾನಿಕ್ ಶಾಪ್ ಸೇರಿದಂತೆ ಉಳಿದೆಲ್ಲಾ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗುತ್ತಿದೆ.

ಶನಿವಾರ ಮತ್ತು ಭಾನುವಾರ ದಿನಸಿ, ತರಕಾರಿ ಹಾಲು ಅಂಗಡಿಗಳು ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ತೆರೆದಿರುತ್ತದೆ.

ಎಪ್ರಿಲ್ 21ರಿಂದ ಮೇ 4ರವರೆಗೆ ಹಗಲು ಹೊತ್ತು ಸೇರಿದಂತೆ ಈ ನಿರ್ಬಂಧಗಳನ್ನು ಹೇರಲಾಗಿದೆ. ರಾಜ್ಯದಲ್ಲಿ ಅಗತ್ಯ ಸರಕುಗಳು ಮತ್ತು ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚತಕ್ಕದ್ದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಶಾಲೆ ಕಾಲೇಜು, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರ. ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಪಾ, ಈಜುಕೊಳ. ಕ್ರೀಡಾ ಸಂಕೀರ್ಣ, ಅಮ್ಯೂಸ್ ಮೆಂಟ್ ಪಾರ್ಕ್ ಗಳು ಬಂದ್ ಆಗಿರಲಿದೆ.

ಹೋಟಲ್, ರೆಸ್ಟೋರೆಂಟ್, ಲಿಕ್ಕರ್ ಶಾಪ್, ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ಪಡಿತರ ಅಂಗಡಿ ಮತ್ತು ದಿನಸಿ, ಹಣ್ಣು ತರಕಾರಿ, ಹಾಲಿನ ಬೂತ್, ಮೀನು-ಮಾಂಸ, ಪಶು ಆಹಾರ ಅಂಗಡಿಗಳ ಸೇವೆಗೆ ಅವಕಾಶ ನೀಡಲಾಗಿದೆ.