ಮುಂಬಯಿ: ಭೂಗತ ದೊರೆ ರವಿ ಪೂಜಾರಿ ಖಾಸಾ ಸಹಚರನಾಗಿದ್ದ ಮೋಸ್ಟ್ ವಾಂಟೆಡ್‌ ಡಾನ್ ಸುರೇಶ್ ಪೂಜಾರಿಯನ್ನು ಎಫ್.ಬಿ.ಐ ಶಿಫಾರಸು ಮೇರೆಗೆ ಫಿಲಿಫೈನ್ಸ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕರಾವಳಿಯ ಕುಂದಾಪುರ ಮೂಲದ ಸುರೇಶ್ ಪೂಜಾರಿ ರವಿ ಪೂಜಾರಿ ಸಹಚರನಾಗಿದ್ದು, ಭೂಗತ ಪಾತಕಿ ಕಲಿ ಯೋಗಿಶ್’ನ ಆತ್ಮೀಯ ಸ್ನೇಹಿತನಾಗಿದ್ದ. ಬೆಂಗಳೂರು ಶಭಾನಾ ಡೆವಲಪರ್ ಶೂಟೌಟ್ ಪ್ರಕರಣದಲ್ಲಿ ಸುರೇಶ್ ಪೂಜಾರಿ ಆರೋಪಿಯಾಗಿದ್ದ ನಂತರ ದುಬೈ ಗೆ ಪರಾರಿಯಾಗಿ ಅಲ್ಲಿ ನೆಲಸಿದ್ದ.

ಹುಬ್ಬಳ್ಳಿ: ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!

ನಂತರದ ಬೆಳವಣಿಗೆಯಲ್ಲಿ ಸಣ್ಣ ವಿಚಾರದಲ್ಲಿ ರವಿ ಪೂಜಾರಿ ಮತ್ತು ಸುರೇಶ್ ಪೂಜಾರಿ ನಡುವೆ ವೈಮನಸ್ಸು ಉಂಟಾಗಿ‌ ನಂತರ ತನ್ನದೇ ಒಂದು ಗ್ಯಾಂಗ್ ಸುರೇಶ್ ಪೂಜಾರಿ ಕಟ್ಟಿಕೊಂಡಿದ್ದ. ಮುಂಬಯಿ ಉಲ್ಲಾಸ್ ನಗರದಲ್ಲಿ ಕೊಲೆ, ಬೆದರಿಕೆ, ಹಫ್ತಾ ವಸೂಲಿ ಕೇಸ್ ಗಳು ಆತನ‌ ಮೇಲೆ ಇದ್ದವು. ಮುಂಬಯಿ ನಗರದಲ್ಲಿ ಕೆಲವು ಶೂಟೌಟ್ ಕೂಡ ನಡೆಸಿದ್ದ. ಆತನ ಸಹಚರರಾದ ಕೆಲವರವನ್ನು ಪೊಲೀಸರು ಬಂಧಿಸಿದ್ದರು. ರವಿ ಪೂಜಾರಿ ಬಂಧನದ ಬಳಿಕ ದುಬೈ ನಿಂದ ಫಿಲಿಫೈನ್ಸ್ ಗೆ ಪರಾರಿಯಾಗಿ ಅಲ್ಲಿಯೇ ನೆಲಸಿದ್ದ ಎನ್ನಲಾಗಿದೆ.

FBI ಮಾಹಿತಿ ಪ್ರಕಾರ ಸುರೇಶ್ ಪೂಜಾರಿ ಭಾರತದ ಮೋಸ್ಟ್ ವಾಂಟೆಡ್‌ ಕ್ರಿಮಿನಲ್ ಅವನಿಂದ ಬೆದರಿಕೆ ಇದೆ ಎಂಬ ಶಿಫಾರಸು ಮೇರೆಗೆ ಫಿಲಿಫೈನ್ಸ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸುರೇಶ್ ಪೂಜಾರಿಯನ್ನು ಫಿಲಿಫೈನ್ಸ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲಿಯ ವಿಚಾರಣೆ ನಂತರ ಸುರೇಶ್ ಪೂಜಾರಿಯನ್ನು ಭಾರತಕ್ಕೆ ಕರೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ರವಿ ಪೂಜಾರಿ ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಮೋಸ್ಟ್ ವಾಂಟೆಡ್‌ ಭೂಗತ ಪಾತಕಿ ಸುರೇಶ್ ಪೂಜಾರಿಯ ಮಾಹಿತಿ ಹೊರಬಂದಿದೆ ಎಂಬ ವರದಿ ಮಾಧ್ಯಮದಲ್ಲಿ ವರದಿಯಾಗಿತ್ತು.