ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 5 ಕೆಜಿ ಅಕ್ಕಿ .! - BC Suddi
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 5 ಕೆಜಿ ಅಕ್ಕಿ .!

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 5 ಕೆಜಿ ಅಕ್ಕಿ .!

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳುಗಳಲ್ಲಿ ದೇಶದಲ್ಲಿ ಕೋವಿಡ್-19 ಉಲ್ಬಣದಿಂದ ಉಂಟಾದ ಆರ್ಥಿಕ ಅಡಚಣೆಗಳಿಂದಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ಅಡಿಯಲ್ಲಿ ಬರುವ ಲಕ್ಷಾಂತರ ಬಡವರಿಗೆ ಸರ್ಕಾರ 5 ಕಿಲೋಗ್ರಾಂ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಿದೆ ಎಂದು ಕೇಂದ್ರ ಶುಕ್ರವಾರ ಹೇಳಿದೆ.

ಅದರಂತೆ ರಾಜ್ಯದಲ್ಲಿ ಮೇ 10 ರಿಂದ . ಬಿಪಿಎಲ್ ಕಾರ್ಡು ಹೊಂದಿದ ಪ್ರತಿ ಸದಸ್ಯರಿಗೆ 2 ಕೆಜಿ ಅಕ್ಕಿ, 3 ಕೆಜಿ ರಾಗಿ ಮತ್ತು ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದಲ್ಲದೇ ಅಂತ್ಯೋದಯ ಕಾರ್ಡ್ ಹೊಂದಿದ ಫಲಾನುಭವಿಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿಯನ್ನು ಸಹ ನೀಡಲಾಗುವುದು ಅಂತ ತಿಳಿದು ಬಂದಿದೆ. ಈ ಬಗ್ಗೆ ಟ್ವಿಟ್‌ ಮಾಡಿರುವ ಸಿಎಂ ಬಿಎಸ್‌ವೈ `ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ಯಡಿ ಕೇಂದ್ರ ಸರಕಾರ ಉಚಿತ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದು, ಕೊರೋನ ಸಂಕಷ್ಟದ ನಡುವೆ ಬಡಜನರಿಗೆ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರ 26 ಸಾವಿರ ಕೋಟಿ ರೂ.ವೆಚ್ಚದಲ್ಲಿ ಮೇ ಮತ್ತು ಜೂನ್ ತಿಂಗಳಿನಲ್ಲಿ 5 ಕೆ.ಜಿ. ಉಚಿತ ಆಹಾರ ಧಾನ್ಯಗಳನ್ನು ವಿತರಿಸಲಿದೆ ಎಂದು ತಿಳಿಸಿದ್ದಾರೆ.