ಲಖನೌ(ಉತ್ತರ ಪ್ರದೇಶ): ಪ್ರತಿಪಕ್ಷಗಳು ಅಪರಾಧಗಳನ್ನು ರಾಜಕೀಯಗೊಳಿಸುತ್ತಿವೆ. ಈ ಮೂಲಕ ಮಾಫಿಯಾಗಳನ್ನು ರಕ್ಷಿಸುತ್ತಿವೆ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಹಾಗೂ ಮಾಜಿ ಸಿಎಂ ಮಾಯಾವತಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಎಸ್‍ಪಿ ಹೊರತುಪಡಿಸಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಇದರಿಂದಾಗಿ ರಾಜಕೀಯ ಪ್ರತಿಸ್ಪರ್ಧಿಗಳು ರಾಜ್ಯವನ್ನು ಹಿಂದುಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಯಾವತಿ ಟ್ವೀಟ್‌ನಲ್ಲಿ ಇರುವ ಅಂಶ: ಬಿಎಸ್‍ಪಿ ಹೊರತುಪಡಿಸಿ ಎಲ್ಲಾ ಪಕ್ಷಗಳ ಸರ್ಕಾರಗಳು ರಾಜಕೀಯವನ್ನು ಅಪರಾಧೀಕರಿಸುತ್ತಿವೆ. ಮತ್ತು ಅಪರಾಧವನ್ನು ರಾಜಕೀಯಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಕಾನೂನಿನೊಂದಿಗೆ ಆಟವಾಡುವುದು ಮತ್ತು ತಮ್ಮ ಪಕ್ಷದ ಗೂಂಡಾಗಳನ್ನು ಹಾಗೂ ಮಾಫಿಯಾವನ್ನು ರಕ್ಷಿಸುತ್ತಿದ್ದಾರೆ. ಉತ್ತರ ಪ್ರದೇಶವನ್ನು ಬಡ ಮತ್ತು ಹಿಂದುಳಿಯುವಂತೆ ಮಾಡುವ ಮೂಲಕ ಜಂಗಲ್ ರಾಜ್‌ಗೆ ತಳ್ಳುತ್ತಿದ್ದಾರೆ ಎಂದು ಟ್ವೀಟ್‍ನಲ್ಲಿ ಕಿಡಿಕಾರಿದರು.