ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಕಮಲ್ ಪಂತ್ ಅವರಿಗೆ ಅವಮಾನ ಮಾಡಿದ್ದಕ್ಕೆ, ಪೊಲೀಸರೇ ಪ್ರಕರಣವನ್ನು ಲೀಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಉರ್ದು ಬರಲ್ಲ ಅಂತ ಹೇಳಿ ಒಬ್ಬ ಹುಡುಗನ ಕೊಲೆ ಆಗಿದೆ ಎಂದು ಹೇಳಿದ್ದರಲ್ಲ. ಆ ಕೇಸ್ ಅಲ್ಲಿ ಕಮಿಷನರ್ ಗೆ ಅವಮಾನ ಮಾಡಲಾಗಿತ್ತು. ಅವರು ಪ್ರಕರಣದ ಬಗ್ಗೆ ನೀಡಿದ್ದ ಹೇಳಿಕೆ ಸರಿ ಇಲ್ಲ ಎಂದು ಹೇಳಲಾಗಿತ್ತು. ಹಾಗಾಗಿ, ಪೊಲೀಸರೇ ಪಿಎಸ್ಐ ಅಕ್ರಮ ಲೀಕ್ ಮಾಡಿದ್ದಾರೆ. ಅದೆಲ್ಲ ಹೇಳೋಕೆ ಹೋದ್ರೆ ದೊಡ್ಡ ಕಥೆ ಎಂದು ಹೆಚ್ ಡಿಕೆ ಹೇಳಿದ್ದಾರೆ. ಈ ಮೂಲಕ ಸರ್ಕಾರದ ಮೇಲೆ ಇನ್ನಷ್ಟು ಅನುಮಾನ ಮೂಡುವಂತೆ ಮಾಡಿದ್ದಾರೆ.