ಲಾಹೋರ್: ಪಾಕಿಸ್ತಾನದ ಜಲಗಡಿಯನ್ನು ಪ್ರವೇಶಿಸಿದ ಆರೋಪದಲ್ಲಿ 20 ಭಾರತೀಯ ಮೀನುಗಾರರನ್ನು ಬಂಧಿಸಿದ್ದ ಪಾಕಿಸ್ತಾನವು ಅವರನ್ನು ವಾಘ್ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.

ಪಾಕಿಸ್ತಾನದ ಜಲಗಡಿಯನ್ನು ಪ್ರವೇಶ ಮಾಡಿರುವ ಆರೋಪದಲ್ಲಿ ಭಾರತದ 20 ಮಂದಿ ಮೀನುಗಾರರನ್ನು ಬಂಧಿಸಿ ಭಾನುವಾರದಂದು ಕರಾಚಿಯ ಲಾಂಧಿ ಜೈಲಿನಲ್ಲಿ ಜೈಲುವಾಸ ಅನುಭವಿಸಿದ್ದು, ಅವರ ಜೈಲುವಾಸದ ಅವಧಿ ಭಾನುವಾರ ಮುಗಿದ ಹಿನ್ನಲೆಯಲ್ಲಿ ಸೋಮವಾರ ವಾಘ್ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.

ಇಸಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ನೀಡಿದ ತುರ್ತು ಪ್ರವಾಸ ಪ್ರಮಾಣಪತ್ರದ ಮೂಲಕ ಮೀನುಗಾರರು, ಮೊಣಗಾಲೂರಿ ತಾಯಿನಾಡಿನ ಮಣ್ಣಿಗೆ ಕಾಲಿಟ್ಟರು ಎಂದು ಮೂಲಗಳು ಹೇಳಿದೆ.

ಇವರು ಲಾಹೋರ್ ರಸ್ತೆ ಮೂಲಕ ಎಧಿ ಫೌಂಡೇಷನ್ ಮೇಲ್ವಚಾರಣೆಯಲ್ಲಿ ಮೀನುಗಾರರನ್ನು ಭಾರತಕ್ಕೆ ಕರೆ ತಂದು ಕೋವಿಡ್ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆ ಸಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಐದು ವರ್ಷಗಳ ಜೈಲುವಾಸ ಅನುಭವಿಸಿದ್ದ ಮೀನುಗಾರರಿಗೆ ಸದ್ಭಾವನೆಯ ಪ್ರತಿಕವಾಗಿ ತಲಾ ಐದು ಸಾವಿರ ರೂಪಾಯಿಯನ್ನು ನೀಡಿತ್ತು.