ಪಾಕಿಸ್ತಾನ ಸರ್ಕಾರ ಅಲ್ಲಿನ ಸೇನೆಯ ಕೈಯಲ್ಲೇ ಇರುತ್ತದೆ. ಪ್ರಧಾನಮಂತ್ರಿಯಿದ್ದರೂ ಅವರು ಸೇನಾ ಮುಖ್ಯಸ್ಥರಿಗೆ ವಿಧೇಯರಾಗಿಯೇ ಇರಬೇಕು ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೀಗ ಒಂದು ಸಣ್ಣ ವಿಷಯಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಮತ್ತು  ಅಲ್ಲಿನ ಸೇನಾ ಮುಖ್ಯಸ್ಥ ಜನರಲ್​ ಕಮಾರ್​ ಜಾವೇದ್​ ಬಾಜ್ವಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐ (ISI)ಗೆ ಮುಖ್ಯಸ್ಥರನ್ನು ನೇಮಕ ಮಾಡುವ ಸಂಬಂಧ ಈ ಸಂಘರ್ಷ ಪ್ರಾರಂಭವಾಗಿದೆ ಎಂದೂ ಗೊತ್ತಾಗಿದೆ.

ಐಎಸ್​ಐಗೆ ನೂತನ ಮಹಾ ನಿರ್ದೇಶಕರನ್ನಾಗಿ (DG) ಲೆಫ್ಟಿನೆಂಟ್​ ಜನರಲ್​ ನದೀಮ್​ ಅಹ್ಮದ್​ ಅಂಜುಮ್​​ರನ್ನು ನೇಮಕ ಮಾಡಲಾಗಿದೆ ಎಂದು ಅಕ್ಟೋಬರ್​ 6ರಂದು ಪಾಕಿಸ್ತಾನದ ಸಶಸ್ತ್ರ ಪಡೆಯ ಮಾಧ್ಯಮ ವಿಭಾಗವಾದ ಇಂಟರ್​ ಸರ್ವೀಸ್​ ಪಬ್ಲಿಕ್​ ರಿಲೇಶನ್ಸ್​ ಘೋಷಿಸಿತ್ತು. ಆದರೆ  ಈ ನೇಮಕಾತಿಯನ್ನು ಪ್ರಧಾನಮಂತ್ರಿ ಇಮ್ರಾನ್​ ಖಾನ್​​  ತಿರಸ್ಕರಿಸಿದ್ದಾರೆ. ಐಎಸ್​​ಐ ಡಿಜಿಯನ್ನು ನೇಮಕ ಮಾಡುವ ಹಕ್ಕು ಪ್ರಧಾನಿಗೆ ಇದೆ. ಹೀಗಾಗಿ ಸಶಸ್ತ್ರಪಡೆಯ ನೇಮಕವನ್ನು ನಾನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ. ಅಷ್ಟೇ ಅಲ್ಲ, ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಒಂದು ಹಂತದ ಸ್ಥಿರತೆಗೆ ಬರುವವರೆಗೂ ಡಿಜಿ ಬದಲಾವಣೆ ಮಾಡುವುದು ಬೇಡ. ಈಗಿರುವ ಲೆಫ್ಟಿನೆಂಟ್​ ಜನರಲ್​ ಫಯಾಜ್​ ಹಮೀದ್​​ರೇ ಐಎಸ್​ಐನ ಡಿಜಿಯಾಗಿ ಮುಂದುವರಿಯಲಿ ಎಂದೂ ಹೇಳಿದ್ದಾರೆ. ಇದು ಸೇನಾ ಮುಖ್ಯಸ್ಥನ ಅಸಮಾಧಾನಕ್ಕೆ ಕಾರಣವಾಗಿದೆ.

ಹನಿಟ್ಟ್ಯಾಪ್ ಮಾಡುತ್ತಿದ್ದ ಸುಂದರಿ ಬೆಂಗಳೂರು ಪೊಲೀಸರ ಬಲೆಗೆ, ಹೈ ಪ್ರೊಫೈಲ್ ವ್ಯಕ್ತಿಗಳನ್ನೆ ಟಾರ್ಗೆಟ್ ಮಾಡ್ತಿದ್ಲು ಚೆಲುವೆ

ಐಎಸ್​ಐ ಮುಖ್ಯಸ್ಥನ ನೇಮಕಕ್ಕೆ ಸಂಬಂಧಪಟ್ಟಂತೆ ತಮ್ಮಿಬ್ಬರ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳಲು ಸೇನಾ ಮುಖ್ಯಸ್ಥ ಜನರಲ್​ ಬಾಜ್ವಾ ಮತ್ತು ಇಮ್ರಾನ್​ ಖಾನ್​ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಅದಕ್ಕೊಂದು ಪರಿಹಾರ ಸಿಗುತ್ತಿಲ್ಲ. ಈ ಮಧ್ಯೆ ನಡೆದ ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಗೆ,  ಐಎಸ್​ಐ ನೂತನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್​ ನದೀಮ್​​ ಗೈರಾಗಿದ್ದಾರೆ ಎಂದು ಪಾಕ್​ ಮಾಧ್ಯಮಗಳೂ ವರದಿ ಮಾಡಿವೆ.   ಈ ಮಧ್ಯೆ ಪಾಕಿಸ್ತಾನ ಮಾಹಿತಿ ಸಚಿವ ಫಾವಾದ್​ ಚೌಧರಿ ಟ್ವೀಟ್​ ಮಾಡಿ, ಐಎಸ್​ಐಗೆ ಹೊಸ ಡಿಜಿ ನೇಮಕ ಸಂಬಂಧ ನಾಗರಿಕಯಾನ ಮತ್ತು ಸೇನಾ ನಾಯಕತ್ವದ ನಡುವಿನ ಸಮಾಲೋಚನೆ ಮುಕ್ತಾಯಗೊಂಡಿದ್ದು, ಡಿಜಿ ನೇಮಕ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.