ನೀವು ರೈಲ್  ಪ್ರಯಾಣ ಮಾಡುವವರ ಹಾಗಾದ್ರೆ ಈ ಸುದ್ದಿ ಒಮ್ಮೆ ಓದಿ ಬಿಡಿ.! - BC Suddi
ನೀವು ರೈಲ್  ಪ್ರಯಾಣ ಮಾಡುವವರ ಹಾಗಾದ್ರೆ ಈ ಸುದ್ದಿ ಒಮ್ಮೆ ಓದಿ ಬಿಡಿ.!

ನೀವು ರೈಲ್  ಪ್ರಯಾಣ ಮಾಡುವವರ ಹಾಗಾದ್ರೆ ಈ ಸುದ್ದಿ ಒಮ್ಮೆ ಓದಿ ಬಿಡಿ.!

ನವದೆಹಲಿ: ಕೋವಿಡ್‌ 19 ಸೋಂಕು ಹರಡುವುದನ್ನು ನಿರ್ಬಂಧಿಸುವುದಕ್ಕಗಿ ಆರೋಗ್ಯ ಮತ್ತು ಕುಟುಂಬ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ‘ಕೋವಿಡ್ ನಿಯಂತ್ರಣ ಶಿಷ್ಟಾಚಾರ’ದ ಪ್ರಕಾರ ರೈಲ್ವೆ ಇಲಾಖೆಯು ರೈಲ್ವೆ ನಿಲ್ದಾಣದ ಆವಣರದಲ್ಲಿರುವವರು ಮತ್ತು ರೈಲುಗಳಲ್ಲಿ ಸಂಚರಿಸುವವರು ಮಾಸ್ಕ್ ಧರಿಸದಿದ್ದರೆ ₹500 ದಂಡ ವಿಧಿಸುವುದಾಗಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಮಾರ್ಗಸೂಚಿಯಲ್ಲಿ ಮಾಸ್ಕ್‌ ಧರಿಸುವುದು ಕೂಡ ಒಂದು. ರೈಲಿನಲ್ಲಿ ಪ್ರಯಾಣಿಸುವವರು ಮತ್ತು ರೈಲ್ವೆ ನಿಲ್ದಾಣ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಅದನ್ನು ಉಲ್ಲಂಘಿಸಿದರೆ ಭಾರತೀಯ ರೈಲ್ವೆ (ರೈಲ್ವೆ ಆವರಣದ ಶುಚಿತ್ವಕ್ಕೆ ಧಕ್ಕೆ ತರುವ ಚಟುವಟಿಕೆಗಾಗಿ ವಿಧಿಸುವ ದಂಡ) ಕಾಯ್ದೆ 2012 ಅನ್ವಯ ದಂಡ ವಿಧಿಸಲಾಗುತ್ತದೆ. ಈ ಕಾಯ್ದೆಯ ಅಡಿಯಲ್ಲಿ ರೈಲು ಮತ್ತು ರೈಲ್ವೆ ಆವರಣದಲ್ಲಿ ಉಗುಳುವವರಿಗೂ ದಂಡ ವಿಧಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.