ನೀವು ಆಸಿಡಿಟಿಯಿಂದ ಬಳಲುತ್ತಿದ್ದರೆ ಹೀಗೆ ಮಾಡಿ ಕಂಟ್ರೂಲ್ ಮಾಡಿ.! - BC Suddi
ನೀವು ಆಸಿಡಿಟಿಯಿಂದ ಬಳಲುತ್ತಿದ್ದರೆ ಹೀಗೆ ಮಾಡಿ ಕಂಟ್ರೂಲ್ ಮಾಡಿ.!

ನೀವು ಆಸಿಡಿಟಿಯಿಂದ ಬಳಲುತ್ತಿದ್ದರೆ ಹೀಗೆ ಮಾಡಿ ಕಂಟ್ರೂಲ್ ಮಾಡಿ.!

ಬಹಳ ಜನ ಇಂದಿನ ಫುಡ್ ಪ್ಯಾಟ್ರನ್ ನಿಂದ ಆಸಿಡಿಟಿಯನ್ನು ಬರಮಾಡಿಕೊಂಡಿರುತ್ತಾರೆ. ಜೊತೆಗೆ ಇಂದು ಎಲ್ಲರನ್ನೂ ಕಾಡುವ ಸಮಸ್ಯೆ ಆಸಿಡಿಟಿ.

ಚಿಕ್ಕ ಮಕ್ಕಳಿಗೂ ಸೇರಿದಂತೆ ದೊಡ್ಡವರನ್ನೂ ಕಾಡುವ ಗ್ಯಾಸ್ಟ್ರಿಕ್. ಇದನ್ನು ತಡೆಗಟ್ಟಲು ನಾವು ಮಾಡಬೇಕಾದ ಸೂತ್ರಗಳು ಹೀಗಿವೆ. ನಮ್ಮ ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ ಸುಳಿಯುವುದಿಲ್ಲ.

ಕೆಲವು ತರಕಾರಿ ಅಥವಾ ಆಹಾರ ಪದಾರ್ಥ ಆಸಿಡಿಟಿ ಉಂಟು ಮಾಡುತ್ತದೆ ಅಂದರೆ ಅವುಗಳ ಸೇವನೆಯನ್ನು ನಿಲ್ಲಿಸಿಬಿಡಿ.

ಟೀ – ಕಾಫಿ ಅವೈಡ್‌ ಮಾಡಿ. ಹುರಿದ ಆಹಾರ ಪದಾರ್ಥ, ಉಪ್ಪಿನಕಾಯಿ, ವಿಪರೀತ ಖಾರದ ಆಹಾರ ಪದಾರ್ಥ, ವಿನೆಗರ್‌ ಮತ್ತು ಚಾಕಲೇಟ್‌ ಅತಿಯಾದ ಸೇವನೆ ಬೇಡ.

ಅವಸರದಲ್ಲಿ ಊಟ ಮಾಡಬೇಡಿ. ಊಟ ಮಾಡಿದ ತಕ್ಷಣ ನಿದ್ದೆ ಮಾಡಬೇಡಿ.

ಮೊಟ್ಟೆಯ ಬಿಳಿ ಭಾಗ ನಿಮ್ಮ ಆಹಾರದೊಂದಿಗಿರಲಿ. ಇದು ಬೇಗನೆ ಜೀರ್ಣಗೊಳ್ಳುತ್ತದೆ.

ಪಾಲಾಕ್‌ ಸೊಪ್ಪು, ಮೆಂತ್ಯೆ, ಎಲೆಕೋಸು, ಹೂಕೋಸು ಆಹಾರದಲ್ಲಿ ಹೆಚ್ಚಿರಲಿ. ಇವುಗಳಲ್ಲಿ ಮಿನರಲ್‌ ಮತ್ತು ಪೋಷಕಾಂಶಗಳು ದೊರೆಯುತ್ತವೆ.

ನಿತ್ಯ ಬಾಳೆಹಣ್ಣು ಸೇವಿಸಿ.

ಪುದೀನಾ ಜ್ಯೂಸ್‌, ಕ್ಯಾಬೇಜ್‌ ಜ್ಯೂಸ್‌ ನಿತ್ಯ ಸೇವಿಸುವುದರಿಂದ ಆಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ.

ನೀರನ್ನು ಹೆಚ್ಚಾಗಿ ಕುಡಿಯಬೇಕು. ನಿತ್ಯ ಎಳೆನೀರು ಹಾಗೂ ಹಾಲು ಕುಡಿದರೆ ಒಳ್ಳೆಯದು.

ಕೆಂಪಕ್ಕಿ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅನ್ನ ಆರೋಗ್ಯಕ್ಕೆ ಒಳ್ಳೆಯದು.